ವಿಮಾನ ಲ್ಯಾಂಡಿಂಗ್‌ಗೆ ಮತ್ತೆ ಹವಾಮಾನ ಅಡ್ಡಿ

shimogga flight
ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಸೇಫ್ ಆಗಿ ಲ್ಯಾಂಡ್ ಆದ ವಿಮಾನ
Published on

ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಬೆಂಗಳೂರಿನಿಂದ ಗುರುವಾರ ಬೆಳಗ್ಗೆ ಶಿವಮೊಗ್ಗ ಏರ್‌ಪೋರ್ಟ್‌ಗೆ ಕರೆತಂದ ವಿಮಾನ ಲ್ಯಾಂಡ್ ಆಗಲು ಪ್ರತಿಕೂಲ ಹವಾಮಾನ ಅಡ್ಡಿಯಾಯಿತು. ಈ ಕಾರಣಕ್ಕೆ ಸುಮಾರು 20 ನಿಮಿಷ ಆಗಸದಲ್ಲೇ ಸುತ್ತಿದ ವಿಮಾನ ಬಳಿಕ ಲ್ಯಾಂಡ್ ಆಯಿತು.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ಇಂಡಿಗೋ ಸಂಸ್ಥೆಯ ವಿಮಾನ ಬೆಳಗ್ಗೆ 11.05ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ಮೋಡ ಕವಿದ ವಾತಾವರಣವಿದ್ದ ಕಾರಣ ವಿಮಾನ ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಮಾನ ಆಗಸದಲ್ಲೇ ನಾಲ್ಕೈದು ಸುತ್ತುಹಾಕಿತು. ಹವಾಮಾನ ತಿಳಿಯಾದ ಬಳಿಕ ಪೈಲೆಟ್ ಯಶಸ್ವಿಯಾಗಿ ಲ್ಯಾಂಡ್ ಮಾಡಲಾಯಿತು.
ಅ.2ರಂದು ಪ್ರತಿಕೂಲ ಹವಾಮಾನ ಕಾರಣ ವಿಮಾನ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗದೇ ಬೆಂಗಳೂರಿಗೆ ಮರಳಿತ್ತು. ಸಂಜೆ ವೇಳೆಗೆ ಮತ್ತೆ ಶಿವಮೊಗ್ಗಕ್ಕೆ ಪ್ರಯಾಣಿಕರನ್ನು ಕರೆತರಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net