

ಬೆಂಗಳೂರು: ರಾಜ್ಯ ಸರ್ಕಾರ(State Government) ಮತ್ತು ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿರುವ ಅಕ್ಕಿ ಗೊಂದಲದ ಕುರಿತು ಇಂದು ತಮ್ಮ ಸದಾಶಿವನಗರದ ನಿವಾಸದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್(DK Shivakumar) ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಕೇಂದ್ರ ಸರ್ಕಾರ(Central Government) ಅಕ್ಕಿಯನ್ನು ಕೊಡಲು ನಿರಾಕರಿಸಿದ ಕಾರಣವನ್ನು ಮುಂದಿಟ್ಟ ಡಿಸಿಎಂ, "ಅಕ್ಕಿಯನ್ನು ಬೇರೆ ರಾಜ್ಯದಿಂದ ತರುವ ಬಗ್ಗೆ ಈಗಾಗಲೇ ಮಾತುಕತೆ ನಡೆದಿದೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ನಮ್ಮ ಪಕ್ಷ ಬೇರೆ ಪಕ್ಷದಂತೆ ಅಲ್ಲ! ನಮ್ಮ ಪಕ್ಷ ವಿಭಿನ್ನವಾಗಿದೆ. ಸಿದ್ದರಾಮಯ್ಯ(Siddaramaiah) ಮತ್ತು ನಮ್ಮ ಸಚಿವರು ದೆಹಲಿಗೆ ಹೋಗಿ ಯಾರನ್ನು ಭೇಟಿಯಗಿದ್ದಾರೆ, ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ" ಎಂದು ಹೇಳಿದರು.
ಇನ್ನು ಶೋಭ ಕರಂದ್ಲಾಜೆ ಮಾತಿಗೆ ತಿರುಗೇಟು ನೀಡಿದ ಡಿ.ಕೆ. ಶಿವಕುಮಾರ್,"5 ವರ್ಷದಲ್ಲಿ ಅವರ ಪ್ರಣಾಳಿಕೆ ಪೂರ್ಣ ಮಾಡಲಿಲ್ಲ. ಅದನ್ನು ಈಗ ನಾವು ಮಾಡುತ್ತಿದ್ದೇವೆ. ನಮಗೆ ಬಡವರ ಬಗ್ಗೆ ಕಾಳಜಿ ಇದೆ"ಎಂದು ಸುದ್ದಿಗಾರರಿಗೆ ಹೇಳಿದರು.