ನೋಡ್ತಾ ಇರಿ ಸಂಜೆ ವೇಳೆಗೆ ಚುನಾವಣಾ ಫಲಿತಾಂಶವೇ ಬದಲಾಗಲಿದೆ: ಕೈಲಾಶ್​ ವಿಜಯವರ್ಗಿಯ

Vijayavargiya
Published on

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಭಾರಿ ಮುನ್ನಡೆಯೊಂದಿಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತ ದಾಪುಗಾಲು ಇಡುತ್ತಿದ್ದೆ. ಆದರೆ, ಸಂಜೆ ವೇಳೆಗೆ ಫಲಿತಾಂಶದ ಚಿತ್ರಣವೇ ಬದಲಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್​ ವಿಜಯವರ್ಗಿಯ ಹೇಳಿದ್ದಾರೆ.

ಸದ್ಯದ ಟ್ರೆಂಡ್​ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 188 ಮತ್ತು ಬಿಜೆಪಿ 99 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಟ್ರೆಂಡ್​ ಹೀಗೆ ಮುಂದುವರಿದರೆ ಟಿಎಂಸಿ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ.

ಮತಎಣಿಕೆಯ ನಡುವೆಯೇ ಮಾತನಾಡಿರುವ ಕೈಲಾಶ್​ ವಿಜಯವರ್ಗಿಯ, ಇನ್ನು ಹಲವು ಸುತ್ತುಗಳಿರುವ ಕಾರಣ ಈಗಲೇ ಏನನ್ನೂ ಹೇಳಲು ಆಗುವುದಿಲ್ಲ. ಸಂಜೆ ವೇಳೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ನಾವು 3 ರಿಂದ ಪ್ರಾರಂಭಿಸಿದ್ದೇವೆ ಮತ್ತು ನಮಗೆ 100 ಸ್ಥಾನವು ಸಹ ಸಿಗುವುದಿಲ್ಲ ಎಂದು ಸವಾಲು ಹಾಕಲಾಯಿತು. ಆದರೆ, ನಾವು ಆ ಗಡಿ ದಾಟಿದ್ದೇವೆ. ನೋಡ್ತಾ ಇರಿ ನಾವು ಮ್ಯಾಜಿಕ್ ಸಂಖ್ಯೆಯನ್ನು ಸಹ ದಾಟುತ್ತೇವೆಂದು ಹೇಳಿದ್ದಾರೆ.

ಒಟ್ಟು 294 ವಿಧಾನಸಭಾ ಸ್ಥಾನಗಳಲ್ಲಿ ಅಧಿಕಾರದ ಗದ್ದುಗೆ ಏರಲು 147 ಮ್ಯಾಜಿಕ್​ ನಂಬರ್​ ಅವಶ್ಯಕತೆ ಇದೆ. ಅಸ್ತಿತ್ವವೇ ಇರದ ಒಶ್ಚಿಮ ಬಂಗಾಳದಲ್ಲಿ ಬಿಜೆಪಿ ಈ ಬಾರಿ ಗಟ್ಟಿಯಾಗಿ ನಲೆಯೂರಿದ್ದು, ಟಿಎಂಸಿ ಟಕ್ಕರ್​ ಕೊಡುವ ಸಾಧ್ಯತೆ ಇದೆ. ಹೀಗಾಗಿ ಈ ಚುನಾವಣಾ ಫಲಿತಾಂಶದ ಭಾರೀ ನಿರೀಕ್ಷೆ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net