

Actor Bala 4th Marriage: ಇತ್ತೀಚೆಗಷ್ಟೇ ಗಾಯಕಿ ಅಮೃತಾ ಸುರೇಶ್ (Amrutha Suresh) ಹಾಗೂ ಅವರ ಮಾಜಿ ಪತಿ, ನಟ ಬಾಲ (Bala) ಅವರ ಪುತ್ರಿ ಅವಂತಿಕ ತಂದೆಯ ಮಾತುಗಳಿಂದ ತೀವ್ರ ಬೇಸರದಿಂದ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿ, ನಟನ ಅಸಲಿ ಮುಖವನ್ನು ಕಳಚಿಟ್ಟಿತು. ಈ ವಿಷಯದಿಂದ ವ್ಯಾಪಕ ಟ್ರೋಲ್, ಟೀಕಗೆಳಿಗೆ ಗುರಿಯಾದ ನಟ ಬಾಲಾ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಇದೀಗ ನಾಲ್ಕನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಳೆದ ವಾರವಷ್ಟೇ ತಾನು ನುಡಿದಂತೆಯೇ ನಾಲ್ಕನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟ, ತನ್ನ ಕುಟುಂಬದವರೇ ಆದ ಕೋಕಿಲಾ ಎಂಬ ಯುವತಿಯನ್ನು ಮದುವೆಯಾಗಿದ್ದಾರೆ. ಭಾರೀ ವಿವಾದಗಳ ನಡುವೆಯೂ ವಿವಾಹವಾದ ಬಾಲಾಗೆ ಮತ್ತೊಮ್ಮೆ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆ ಹರಿದುಬರುತ್ತಿದೆ. ಇದರ ಮಧ್ಯೆಯೇ ಇದೀಗ ಮತ್ತೊಂದು ಶಾಕಿಂಗ್ ವಿಷಯವನ್ನು ಹಂಚಿಕೊಂಡಿರುವ ನಟ, ನನಗೂ ಕೋಕಿಲಗೂ 18 ವರ್ಷ ವಯಸ್ಸಿನ ಅಂತರವಿದೆ. ಆಕೆಗೆ ಈಗ 24 ವರ್ಷ. ಹೀಗಾಗಿ ಶೀಘ್ರವೇ ಮಗು ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
"ಶೀಘ್ರದಲ್ಲೇ ಮಗುವನ್ನು ಸ್ವಾಗತಿಸುತ್ತೇವೆ, ಒಟ್ಟಿಗೆ ಸಂತೋಷದ ಜೀವನ ನಡೆಸುತ್ತೇವೆ. ಇಷ್ಟು ದಿನ ನನ್ನನ್ನು ಪ್ರೀತಿಸುತ್ತಿದ್ದ ಕೋಕಿಲಾ ಪ್ರೀತಿಯನ್ನು ನಾನು ಗುರುತಿಸಲೇ ಇಲ್ಲ. ಎಷ್ಟು ಮೂರ್ಖ ನಾನು. ಅವಳ ಮಾತುಗಳು ನನಗೆ ಬಹಳ ಸ್ಪೂರ್ತಿದಾಯಕವಾಗಿವೆ. ಇಷ್ಟು ದಿನ ಅರ್ಥ ಮಾಡಿಕೊಂಡಿರಲಿಲ್ಲ. ಕೆಲವರಿಗೆ ನನ್ನ ಬಿಚ್ಚುಮಾತು ತಮಾಷೆ ಎನ್ನಿಸಬಹುದು. ಆದರೆ, ಇಲ್ಲಿ ನಾನೇನು ಹೇಳ್ತಿದ್ದೀನೋ ಅದೆಲ್ಲವೂ ಸತ್ಯವೇ. ನನ್ನಲ್ಲಿ ಪದೇ ಪದೇ ಸಮಸ್ಯೆ ಹುಡುಕುವವರಿಗೆ ನಾನೇನು ಹೇಳಲು ಇಚ್ಛಿಸುವುದಿಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).