'ನಮಗೆ ಹಳೇ ಅನುಪಮಾ ಬೇಕು'! ನಟಿಗೆ ತಪ್ತಿಲ್ಲ ಫ್ಯಾನ್ಸ್​ ಗೋಳು

Untitled design - 2024-02-23T185448.750
Published on

ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಗೊಂಡ ಟಾಲಿವುಡ್​ನ ಸೂಪರ್​ ಹಿಟ್​ ಡಿಜೆ ಟಿಲ್ಲು ಸಿನಿಮಾದ ಸೀಕ್ವೇಲ್​ ಟಿಲ್ಲು ಸ್ಕ್ವೇರ್​ನ ಟ್ರೇಲರ್​ನಲ್ಲಿ ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡ ನಟಿ ಅನಪಮಾ ಪರಮೇಶ್ವರನ್​, ನಟ ಸಿದ್ದು ಜತೆಗೆ ಲಿಪ್​ ಲಾಕ್​ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಹಾಗೂ ಅಭಿಮಾನಿಗಳ ಅತೀವ ಬೇಸರಕ್ಕೆ ಕಾರಣರಾಗಿದ್ದಾರೆ.

ಟಿಲ್ಲು ಸ್ಕ್ವೇರ್​ ಚಿತ್ರದ ಬಿಡುಗಡೆಯಾಗಿರುವ ಪೋಸ್ಟರ್​ ಹಾಗೂ ಟ್ರೇಲರ್​​ನಲ್ಲಿ ಹಿಂದೆಂದೂ ಕಾಣಿಸಿಕೊಳ್ಳದ ಹಾಟ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಪಮಾ ತುಂಬಾ ಹಾಟ್ ಲುಕ್​ನಲ್ಲಿ ಕಂಗೊಳಿಸಿದ ದೃಶ್ಯ ಸದ್ಯ ಅಪಾರ ಸಂಖ್ಯೆಯ ಅಭಿಮಾನಿಗಳ ಹೃದಯ ಹೊಡೆದಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ನಲ್ಲಿ, ಅನುಪಮಾ ಲಿಪ್‌ಲಾಕ್ ಸೀನ್​ನಲ್ಲಿ ನಟಿಸಿದ್ದಾರೆ. ಇದನ್ನು ನೋಡಿದ ಅನುಪಮಾ ಫ್ಯಾನ್ಸ್​ ತುಂಬಾ ಬೇಸರಗೊಂಡಿದ್ದು, ಹಳೆಯ ಅನುಪಮಾ ಬೇಕಿತ್ತು. ನೀವು ನಿಮ್ಮನ್ನು ಪ್ರೀತಿಸುವ ಅಭಿಮಾನಿಗಳನ್ನು ಕಳೆದುಕೊಂಡಿದ್ದೀರಿ ಎಂದೆಲ್ಲಾ ಕಮೆಂಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದರು.

ಆದರೆ ಇದ್ಯಾವುದಕ್ಕೂ ಪ್ರತಿಕ್ರಿಯಿಸದ ನಟಿಗೆ ಬೆಂಬಿಡದೆ ಕಾಡುತ್ತಿರುವುದು ಅಭಿಮಾನಿಗಳ ಕಮೆಂಟ್​ಗಳು! ಹಾಟ್​ ಹಾಗೂ ಬೋಲ್ಡ್​ ಅವತಾರಗಳಲ್ಲಿ ಕಾಣಿಸಿಕೊಂಡ ನಟಿಯ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವ ಫ್ಯಾನ್ಸ್​, ಅನುಪಮಾ ಹುಟ್ಟುಹುಬ್ಬದ ದಿನ ಕೂಡ ಅವರ ಫೋಟೋ ಕೆಳಗೆ ನಮಗೆ ಹಳೇ ಅನುಪಮಾ ಬೇಕು, ಮಿಸ್ಸಿಂಗ ಓಲ್ಡ್​ ಅನುಪಮಾ ಎಂದೆಲ್ಲಾ ಕಮೆಂಟ್ ಮಾಡಿ, ಅತೀವ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಅಸಲಿಗೆ ಟ್ರೇಲರ್​ನಲ್ಲಿ ಬಂದ ಲಿಪ್​ಲಾಕ್​ ದೃಶ್ಯ ಸಿನಿಮಾದ ಇನ್ನು ಯಾವ ಸೀನ್​ಗಳಲ್ಲಿ ಇರಬಹುದು? ನಟಿ ಹೆಚ್ಚಾಗಿ ಬೋಲ್ಡ್​ ಅವತಾರದಲ್ಲೇ ಕಾಣಿಸಿಕೊಳ್ಳುತ್ತಾರಾ ಎಂಬ ಹಲವಾರು ಗೊಂದಲಗಳು ಸದ್ಯ ಅಭಿಮಾನಿಗಳಲ್ಲಿ ಕಾಡುತ್ತಿದ್ದು. ಈ ಪ್ರಶ್ನೆಗಳಿಗೆ ಸಿನಿಮಾ ಬಿಡುಗಡೆಯ ನಂತರ ಉತ್ತರ ಸಿಗಲಿದೆ ಎಂದೇ ಹೇಳಬಹುದು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net