ಲಾಕ್​ಡೌನ್​ನಿಂದ ತೀವ್ರ ಸಂಕಷ್ಟದಲ್ಲಿ ದುಬೈ ಕನ್ನಡಿಗರು, ಗೃಹ ಸಚಿವ ಬೊಮ್ಮಾಯಿ ಕೊಟ್ಟ ಅಭಯವೇನು?

basavaraj bommai
Published on

ಬೆಂಗಳೂರು: ದುಬೈನಲ್ಲಿರುವ ನಿಮ್ಮೆಲ್ಲರ ಕುಟುಂಬ ವರ್ಗದವರ ಸುರಕ್ಷತೆ ನಮ್ಮ ಹೊಣೆ... ಆ ಬಗ್ಗೆ ಚಿಂತಿಸುವ ಅವಶ್ಯಕತೆ ಇಲ್ಲ... ನೀವು ಇರುವಲ್ಲಿ ಸುರಕ್ಷಿತವಾಗಿರಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ದುಬೈನಲ್ಲಿ ನೆಲೆಸಿರುವ ಕನ್ನಡಿಗರಿಗೆ ಅಭಯ ನೀಡಿದ್ದಾರೆ.

‘ಕರೊನಾ ನಿಯಂತ್ರಣಕ್ಕೆ ಬರುತ್ತಿದ್ದಂತೆ ದುಬೈನಲ್ಲಿರುವ ನಿಮ್ಮೆಲರನ್ನೂ ರಕ್ಷಣೆ ಮಾಡುತ್ತೇವೆ. ಸದ್ಯಕ್ಕೆ ನೀವು ಸುರಕ್ಷಿತವಾಗಿರಿ’ ಎಂದು ದುಬೈ ಕನ್ನಡಿಗರ ಜತೆ ಶನಿವಾರ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ದುಬೈನಲ್ಲಿರುವ ನಿಮ್ಮೆಲ್ಲರ ಕುಟುಂಬದ ಕಾಳಜಿ ಸರ್ಕಾರದ್ದಾಗಿದೆ. ನೀವು ನಿಮ್ಮ ಕುಟುಂಬದ ಬಗ್ಗೆ ಚಿಂತೆ ಬಿಡಿ ಎಂದು ಧೈರ್ಯ ತುಂಬಿದ್ದಾರೆ.

ದುಬೈನಲ್ಲಿರುವ ನೀವೆಲ್ಲರೂ ಈ ಸಂಕಷ್ಟ ಸಮಯದಲ್ಲಿ ಅಲ್ಲಿರುವ ಬಡ ಕನ್ನಡಿಗರಿಗೆ ಸಹಾಯ ಮಾಡಬೇಕು. ಅಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಕನ್ನಡಿಗರಿಗೆ ಸಹಾಯ ಹಸ್ತ ಚಾಚಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net