ವಿಪ್ರ ಸಮಾಜದ ಚಟುಚಟಿಕೆಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ: ಶಾಸಕ ಚನ್ನಬಸಪ್ಪ

Golden wedding honor
ಕುವೆಂಪು ರಂಗಮಂದಿರದಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಸುವರ್ಣ ದಾಂಪತ್ಯ ಪೂರೈಸಿದ ದಂಪತಿಯನ್ನು ಸನ್ಮಾನಿಸಲಾಯಿತು.
Published on

ಶಿವಮೊಗ್ಗ: ವಿಪ್ರ ಸಮಾಜದ ಎಲ್ಲ ಚಟುಚಟಿಕೆಗಳಿಗೂ ನಾವೆಲ್ಲರೂ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಭಾನುವಾರ ವಿಪ್ರ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಘಟಕದಿಂದ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ, ಸುವರ್ಣ ದಾಂಪತ್ಯ ಸನ್ಮಾನ ಹಾಗೂ ಸಂಘದ ಹಿರಿಯ ನಿರ್ದೇಶಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿಪ್ರ ಸಮಾಜವು ಸುವರ್ಣ ದಾಂಪತ್ಯ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದಂತಹ ಸಂಸ್ಕಾರಯುತ ಕೆಲಸವನ್ನು ಮಾಡುತ್ತಿದೆ. ಮುಂದೆಯೂ ಇಂತಹ ಅನೇಕ ಕಾರ್ಯಗಳನ್ನು ನಡೆಸಲು ನಾವೆಲ್ಲರೂ ಸಮಾಜದ ಬೆನ್ನ ಹಿಂದೆ ಇರಬೇಕಿದೆ ಎಂದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ವಿಪ್ರ ಸಮಾಜ ಕೇವಲ ವಿಪ್ರರ ಒಳಿತನ್ನು ಮಾತ್ರ ಬಯಸದೇ ಎಲ್ಲ ಸಮಾಜದ ಒಳಿಗಾಗಿ ಕೆಲಸ ಮಾಡುತ್ತಿದೆ. ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆದಿದ್ದು ಅನೇಕ ನೌಕರರು ಮತ್ತು ಸಮಾಜದವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ.ಕೇಶವಮೂರ್ತಿ, 2004ರಲ್ಲಿ ಪ್ರಾರಂಭವಾದ ಸಂಘವು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಚಿಂತನಾ ಸಮಾವೇಶ, ರಾಜ್ತಮಟ್ಟದ ವಧು-ವರರ ಸಮಾವೇಶ, ತ್ರಿಮಸ್ಥತ, ಮಠಾಧೀಶರ ವಿಪ್ರ ಜಾಗೃತಿ ಸಮಾವೇಶ, ರಾಜ್ಯಮಟ್ಟದ ಶ್ರೀ ಗಾಯತ್ರಿ ಮಾತಾ ಕ್ರಿಕೆಟ್ ಪಂದ್ಯಾವಳಿ ಹಾಗೂ ರಾಜ್ಯಮಟ್ಟದ ಕಾರ್ಯಕಾರಣಿ ಸಭೆಯನ್ನೂ ನಡೆಸಲಾಗಿದೆ ಎಂದರು.
ಹಿರಿಯ ಪತ್ರಕರ್ತರ ಎಸ್.ಸೂರ್ಯಪ್ರಕಾಶ್ ಪಂಡಿತ್ ಅವರು ದಿಕ್ಸೂಚಿ ನುಡಿಗಳನ್ನಾಡಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ 40 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 75 ವಿದ್ಯಾರ್ಥಿಗಳಿಗೆ ಸುಮಾರು 7.50 ಲಕ್ಷ ರೂ. ವಿದ್ಯಾನಿಧಿ ವಿತರಿಸಲಾಯಿತು. ಸುವರ್ಣ ದಾಂಪತ್ಯ ಪೂರೈಸಿದ ವಿಶಾಲಾಕ್ಷಿ-ಎಲ್.ಕೆ.ಚಿದಂಬರ ಜೋಯಿಸ್, ರಾಧಾ-ಬಿ.ಎಸ್.ಗೋಪಿನಾಥ್, ಶಾರದಾ-ಎಸ್.ಆರ್.ನಾಗಭೂಷಣ, ವಿಜಯಾ-ಡಾ. ಕೆ.ಆರ್.ಶ್ರೀಧರ್, ಗಾಯತ್ರಿ-ವೆಂಕಟರಾಜು, ತಾರಾಪ್ರಸಾದ್-ಎ.ಆರ್.ಹರಿಪ್ರಸಾದ್, ಸೀತಮ್ಮ(ಲತಾ)-ಎಚ್.ಎನ್.ವೆಂಕಟಪ್ಪ ದಂಪತಿಯನ್ನು ಸನ್ಮಾನಿಸಲಾಯಿತು.
ಗೌರವಾಧ್ಯಕ್ಷ ಆರ್.ಅಚ್ಯುತರಾವ್, ಪದಾಧಿಕಾರಿಗಳಾದ ಎಚ್.ಎನ್.ಛಾಯಾಪತಿ. ಯು.ಎಸ್.ಕೇಶವಮೂರ್ತಿ, ರವಿಕುಮಾರ್, ಕೆ.ಎನ್.ವಿಶ್ವನಾಥ್, ಎಲ್.ಎನ್.ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net