ನಮಗೆ ನಾವೇ ದಾರಿ ದೀಪವಾಗಬೇಕು: ಟಿ.ಎಚ್.ಹಾಲೇಶಪ್ಪ

Bhimakoregaon
ಭೀಮಕೋರೆಗಾಂವ್ ವಿಜಯೋತ್ಸವ ನಿಮಿತ್ತ ಅಂಬೇಡ್ಕರ್ ಭಾವಚಿತ್ರಕ್ಕೆ ಡಿಎಸ್‌ಎಸ್ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್ ಹಾಲೇಶಪ್ಪ ಪುಷ್ಪನಮನ ಸಲ್ಲಿಸಿದರು. ಶಿವಕುಮಾರ್, ಆನಂದ್, ಶೇಷಪ್ಪ, ಪರಮೇಶ್ ಇತರರಿದ್ದರು.
Published on

ಶಿವಮೊಗ್ಗ: ದಲಿತರು ಶೌರ್ಯ ಸ್ವಾಭಿಮಾನಿಗಳಾಗಿ ಸಂವಿಧಾನಿಕ ಹಕ್ಕುಗಳಿಗೆ ಹೋರಾಡಬೇಕಿದೆ. ಅಲ್ಲದೇ ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ ಎಂದು ಡಿಎಸ್‌ಎಸ್ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್.ಹಾಲೇಶಪ್ಪ ಹೇಳಿದರು.

ನಗರದ ದಲಿತ ಸಂಘರ್ಷ ಸಮಿತಿ-ಅಂಬೇಡ್ಕರ್ ವಾದದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಭೀಮಕೋರೆಗಾಂವ್ ವಿಜಯೋತ್ಸವ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡಿ, ಎಷ್ಟು ಶೋಷಣೆ ಅನ್ಯಾಯಗಳಾದರೂ ಅವುಗಳನ್ನು ಮೆಟ್ಟಿ ನಿಂತು ಸ್ವಾಭಿಮಾನಿಗಳಾಗಿ ಸತ್ಯದ ಹಾದಿಯಲ್ಲಿ ಮುನ್ನಡೆಯಬೇಕಿದೆ ಎಂದರು.
ದಲಿತರ ಏಳಿಗೆ ದಲಿತರ ಕೈಯಲ್ಲೇ ಇದೆ ನಮಗೆ ನಾವೇ ದಾರಿದೀಪವಾಗಬೇಕು. ಕತ್ತಲೆಯಲ್ಲಿರುವ ದಲಿತರ ಬಾಳಿಗೆ ಬೆಳಕಾಗಬೇಕು. ಹೋರಾಟ ಕೇವಲ ಅಸ್ಥಿತ್ವಕ್ಕೆ ಮಾತ್ರ ಸೀಮಿತವಾಗದೆ ಬಡವರ, ಶೋಷಿತರ, ಮಹಿಳೆಯರ ಸ್ವಾಭಿಮಾನವನ್ನು ರಕ್ಷಿಸುವಂತಾಗಬೇಕು ಎಂದರು.
ಎಂ.ಆರ್.ಶಿವಕುಮಾರ್, ಎ.ಡಿ.ಆನಂದ್, ಹುಣಸೋಡು ಶೇಷಪ್ಪ, ಪರಮೇಶ್ ಸಂತೇಕಡೂರು, ಸೂಗೂರು ಪರಮೇಶ್, ಜಗ್ಗು, ಮುತ್ತು, ಪೈಲ್ವಾನ್ ಈಶ್ವರಪ್ಪ, ಮಾಚೇನಹಳ್ಳಿ ರುದ್ರಮ್ಮ, ಲತಾ ಬಿದರೆ, ರಾಧಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net