

Baloch: ಪಾಕಿಸ್ತಾನದಿಂದ ಮುಕ್ತರಾಗಲು ಸದಾ ಹೋರಾಡುತ್ತಿದ್ದ ಬಲೂಚಿಸ್ತಾನ ನಾಯಕರು 'ನಾವು ಪಾಕಿಸ್ತಾನದಿಂದ ಪ್ರತ್ಯೇಕವಾಗಿದ್ದೇವೆ' ಎಂದು ಬುಧವಾರ (ಮೇ.14) ಸ್ವಾತಂತ್ರ್ಯ ಘೋಷಿಸಿಕೊಂಡಿದ್ದಾರೆ.
ಆರು ಕೋಟಿ ಜನರಿರುವ ಬಲೂಚಿಸ್ತಾನ ಸ್ವಾತಂತ್ರ್ಯ ಘೋಷಣೆ ಬೆನ್ನಲ್ಲೇ ‘ರಿಪಬ್ಲಿಕ್ ಬಲೂಚಿಸ್ತಾನ’ ಎಂದು ಅಲ್ಲಿನ ನಾಯಕರು ನಾಮಕರಣ ಮಾಡಿದ್ದಾರೆ. ನಾವು ಪಾಕಿಸ್ತಾನಿಗಳಲ್ಲ, ನಾವು ಬಲೂಚಿಸ್ತಾನಿಗಳು ಎಂದು ಹೇಳಿ, ಸ್ವತಂತ್ರ ಬಲೂಚಿಸ್ತಾನವನ್ನು ಭಾರತ ಮತ್ತು ವಿಶ್ವಸಂಸ್ಥೆ ಗುರುತಿಸಿ ಮಾನ್ಯತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ದಶಕಗಳಿಂದ ಪಾಕಿಸ್ತಾನ ಸರ್ಕಾರ, ಸೇನೆಯ ದೌರ್ಜನ್ಯದ ವಿರುದ್ಧದ ಬಲೂಚ್ ಜನರ ಹೋರಾಟಕ್ಕೆ ಇಂದು ಮುಕ್ತಿ ಸಿಕ್ಕಿದೆ. ಸ್ವಾತಂತ್ರ್ಯ ಘೋಷಿಸಿಕೊಂಡ ನಂತರ ಬಲೂಚ್ ನಾಯಕರು ಪ್ರತ್ಯೇಕ ಬಲೂಚ್ ನಕ್ಷೆ, ಧ್ವಜವನ್ನು ಪ್ರದರ್ಶಿಸಿದ್ದಾರೆ.
ಭಾರತಕ್ಕೆ ಬೆಂಬಲ ದೆಹಲಿಯಲ್ಲಿ ಅಧಿಕೃತ ರಾಯಭಾರ ಕಚೇರಿ ತೆರೆಯಲು ಬಲೂಚಿಸ್ತಾನಕ್ಕೆ ಅವಕಾಶ ಕೊಡಬೇಕು ಎಂದು ಅಲ್ಲಿನ ನಾಯಕರು ಮನವಿ ಮಾಡಿದ್ದಾರೆ. ಪಾಕ್ ಉಗ್ರರ ವಿರುದ್ಧ ಭಾರತ ನಡೆಸಿದ್ದ, ಅಪರೇಷನ್ ಸಿಂಧೂರ ಕಾರ್ಯಾಚರಣೆ ನಮ್ಮ ಬೆಂಬಲ ಇದೆ, ನರೇಂದ್ರ ಮೋದಿ ಅವರೇ ನೀವು ಏಕಾಂಗಿಯಲ್ಲ, ನಿಮ್ಮ ಹಿಂದೆ ಬಲೂಚಿಸ್ತಾನದ 60 ಮಿಲಿಯನ್ ಜನರಿದ್ದಾರೆ ಎಂದಿದ್ದಾರೆ ಎಂದು ಬಲೂಚ್ ಹೋರಾಟಗಾರ ಮೀರ್ ಯಾರ್ ಬಲೂಚ್ ಕೂಡ ಭಾರತಕ್ಕೆ ಬೆಂಬಲ ಘೋಷಿಸಿದ್ದಾರೆ.(ಏಜೆನ್ಸೀಸ್)