ನಮಗೂ ಅಗತ್ಯ ದಾಖಲೆ ನೀಡಲು ಒತ್ತಾಯಿಸಿ ಮನವಿ

3-RNR-07
Published on

ರಾಣೆಬೆನ್ನೂರ: ನಗರದ ಪೂರ್ವ ಮತ್ತು ಪಶ್ಚಿಮ ಬಡಾವಣೆ ನಿವಾಸಿಗಳು ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಸೋಮವಾರ ನಗರಸಭೆ ಅಧ್ಯಕ್ಷೆ ಚಂಪಕಾ ಬಿಸಲಹಳ್ಳಿ ಹಾಗೂ ಆಯುಕ್ತ ಫಕ್ಕಿರಪ್ಪ ಇಂಗಳಗಿ ಅವರಿಗೆ ಮನವಿ ಸಲ್ಲಿಸಿದರು.

ಪೂರ್ವ ಮತ್ತು ಪಶ್ಚಿಮ ಬಡಾವಣೆಯಲ್ಲಿ ಹಲವಾರು ವರ್ಷಗಳಿಂದ ವಾಸ ಮಾಡುತ್ತಿದ್ದು, ನಗರಸಭೆಯಿಂದ ಸರಿಯಾದ ದಾಖಲೆ ದೊರೆಯದೆ ಅನೇಕ ಸಮಸ್ಯೆ ಎದುರಿಸಬೇಕಾಗಿದೆ. ಆದ್ದರಿಂದ ಅಗತ್ಯವಿರುವ ದಾಖಲೆಗಳನ್ನು ನೀಡಬೇಕು.

ಅದರಲ್ಲಿ ಖಾತೆ ಬದಲಾವಣೆ, ಬ್ಯಾಂಕ್​ ಲೋನ್​, ವಾರಸಾ, ಮೃತ್ಯು ಪತ್ರ, ಕಟ್ಟಡ ಪರವಾನಗಿ, ಆಸ್ತಿಗಳ ಮಾರಾಟಕ್ಕೆ ಪರವಾನಗಿ ಕೊಟ್ಟು ಎಲ್ಲ ಹಕ್ಕುಗಳನ್ನು ನೀಡಬೇಕು. ಸದರಿ ಆಸ್ತಿಗಳ ಸಂರ್ಪೂಣ ಹಕ್ಕುಗಳನ್ನು ಹಕ್ಕುಬದ್ದ ಹಾಲಿ ವಾಸ್ತವ ಇರುವ ನಿವಾಸಿಗಳಿಗೆ ನೀಡಬೇಕು. ಬಿಜಾಪುರ ಮಾದರಿಯಲ್ಲಿ ನಮಗೆ ಹಕ್ಕುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಡಾ. ಎಸ್​.ಎಲ್​. ಪವಾರ, ಸುದೀರ ಕುರವತ್ತಿ, ಡಾ. ಗಿರೀಶ ಕೆಂಚಪ್ಪನವರ, ಪ್ರೀತಂ ಜೈನ್​, ಮನೋಹರ ಪಾಸ್ತೆ, ವಿನೋದ ಮಿರಜಕರ, ತುಳಸಿ ಇರಕಲ್ಲ, ನಾರಾಯಣ ದೊಂಗಡೆ, ರಾಜೇಂದ್ರ ಜಂಬಗಿ, ರಾಜೇಂದ್ರ ಜೈನ್​, ಪ್ರಕಾಶ ದಾನಪ್ಪನವರ, ಕುಮಾರ ಜಂಬಗಿ, ಎಸ್​.ಬಿ. ಅಂಗಡಿ, ರಾಜಣ್ಣ ಮುದ್ರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net