ವಯನಾಡು ಭೂಕುಸಿತ: ಮೃತಪಟ್ಟವರು 143! ಚಾಮರಾಜನಗರದ ಇಬ್ಬರು ನಾಪತ್ತೆ, ಇನ್ನಿಬ್ಬರು ಸಾವು

ವಿಜಯವಾಣಿ - 2024-07-31T074741.902
Published on

ಬೆಂಗಳೂರು: ಕೇರಳದ ವಯನಾಡಿನಲ್ಲಿ ಭಾರಿ ಮಳೆಗೆ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 143ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಮಣ್ಣಿನಡಿ ಇನ್ನೂ ನೂರಾರು ಮಂದಿ ಸಿಲುಕಿದ್ದು, ಸುಳಿವು ಸಿಗದಂತೆ ಕಣ್ಮರೆಯಾಗಿದ್ದಾರೆ.  ಒಂದೇ ಕುಟುಂಬದ ಹಲವರು ದುರಂತ ಸಾವು ಕಂಡಿದ್ದು, ಮೃತರ ದೇಹ ಹೊರತೆಗೆಯಲು ರಕ್ಷಣಾ ಪಡೆ ಹರಸಾಹಸ ಪಡುತ್ತಿದೆ.

ಇನ್ನು ವಯನಾಡು ಗುಡ್ಡ ಕುಸಿತ ಪ್ರಕರಣದಲ್ಲಿ ಕರ್ನಾಟಕದ ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದ ನಿವಾಸಿಗಳಾದ 50 ವರ್ಷದ ರಾಜೇಂದ್ರ ಮತ್ತು 45 ವರ್ಷದ ರತ್ನಮ್ಮ ಎಂಬುವವರು ಕಣ್ಮರೆಯಾಗಿದ್ದಾರೆ. 62 ವರ್ಷ ವಯಸ್ಸಿನ ಪುಟ್ಟಸಿದ್ದಿ ಮತ್ತು 50 ವರ್ಷದ ರಾಣಿ ಭೂದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇವರಿಬ್ಬರ ಮೃತದೇಹಗಳು ಪತ್ತೆಯಾಗಿವೆ.

ಒಟ್ಟಾರೆ ಈವರೆಗೆ ಚಾಮರಾಜನಗರ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ. .ಓರ್ವ ವ್ಯಕ್ತಿ ಸಾವಿನಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net