

ಬಹುತೇಕ ಎಲ್ಲಾ ಕೆಲಸಗಳಿಗೆ ಇಂಟರ್ನೆಟ್ ಅನ್ನು ಬಳಸುತ್ತಾರೆ. ಆದರೆ ಇದನ್ನೇ ಗುರಿಯಾಗಿಸಿಕೊಂಡು ಕೆಲವಂಚಕರು ಬಳಕೆದಾರರನ್ನು ಹ್ಯಾಕ್ ಮಾಡುತ್ತಿದ್ದಾರೆ. ಅದರಲ್ಲಿ ಡಾರ್ಕ್ ವೆಬ್ ಎಂಬುದು ಸಹ ಒಂದು. ಈ ಡಾರ್ಕ್ ವೆಬ್ ಅಕ್ರಮ ಚಟುವಟಿಕೆಗಳಿಗೆ ವೇದಿಕೆಯಾಗಿದೆ.
ವಂಚಕರು OTP ವಂಚನೆಗಳು, ಗೂಗಲ್ ನಕ್ಷೆಗಳು, ನಕಲಿ ಬ್ಯಾಂಕ್ ಉದ್ಯೋಗಿಗಳು, SMS ಮತ್ತು ಇನ್ನೂ ಅನೇಕ ತಂತ್ರಗಳ ಮೂಲಕ ತಮ್ಮ ಹಣವನ್ನು ವಂಚಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ, ವಂಚಕರು ಜನರನ್ನು ವಂಚಿಸಲು ಹೊಸ ಮಾರ್ಗವನ್ನು ರೂಪಿಸಿದ್ದಾರೆ.
ಭಾರತದಲ್ಲಿ ಸೈಬರ್ ಹಗರಣಗಳ ಪ್ರಕರಣಗಳು ಹೆಚ್ಚಿದ್ದು, WhatsApp ವಿಡಿಯೋ ಕರೆ ಮೂಲಕ ಇದೀಗ ಹಣ ದೋಚಲು ಖದೀಮರು ಮುಂದಾಗಿದ್ದಾರೆ. ಕರೆಯನ್ನು ಸ್ವೀಕರಿಸಿದರೆ, ನಿಮ್ಮ ಸ್ಕ್ರೀನ್ ಮೇಲೆ ನಿಮ್ಮ ಸಂಬಂಧಿಯ ಮುಖವನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ. ಅದು ನಿಮ್ಮ ಪತಿ, ತಂದೆ, ತಾಯಿ, ಆಪ್ತ ಸ್ನೇಹಿತ ಅಥವಾ ಯಾರಾದರೂ ಆಗಿರಬಹುದು. ಸ್ಕ್ಯಾಮರ್‌ಗಳು, AI ಸಹಾಯದಿಂದ, ನಿಮ್ಮ ಸಂಬಂಧಿಗಳ ಮುಖ ಮತ್ತು ಧ್ವನಿಯನ್ನು ಈಗ ರಚಿಸಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಚ್ಚರ.
ಮಹಿಳೆಯೊಬ್ಬರು ವಾಟ್ಸಾಪ್‌ನಲ್ಲಿ ಹೊಸ ಸಂಖ್ಯೆಯಿಂದ ವಿಡಿಯೋ ಕರೆಯನ್ನು ಸ್ವೀಕರಿಸಿದ್ದಾರೆ. ಆಕೆಯ ಪತಿಯ ಫೋಟೋ ಮತ್ತು ಧ್ವನಿ ಕರೆಯಲ್ಲಿತ್ತು. ಕೂಡಲೇ 2 ಲಕ್ಷ ಹಣ ವರ್ಗಾವಣೆ ಮಾಡುವಂತೆ ಪತ್ನಿಗೆ ಕೇಳಿದ್ದು, ಆ ಮಹಿಳೆ ಕೂಡಲೇ ಹಣವನ್ನು ವರ್ಗಾವಣೆ ಮಾಡಿದ್ದಾಳೆ ಎಂದು ವರದಿಯಾಗಿದೆ.
ವ್ಯಕ್ತಿಯೊಬ್ಬ ತನ್ನ ಆಪ್ತ ಸ್ನೇಹಿತನಿಂದ ವಿಡಿಯೋ ಕರೆ ಸ್ವೀಕರಿಸಿದ ಪ್ರಕರಣವೂ ನಡೆದಿದ್ದು, ಆ ಕರೆಯಲ್ಲಿ ಅವನ ಫೋಟೋ ಮತ್ತು ಧ್ವನಿ ಇದ್ದು, 85 ಸಾವಿರ ರೂಪಾಯಿ ವರ್ಗಾವಣೆ ಮಾಡಿ ಸೈಬರ್ ವಂಚನೆಗೆ ಬಲಿಯಾದರು. ಈ ಹೊಸ ತಂತ್ರದ ಪ್ರಮುಖ ವೈಶಿಷ್ಟ್ಯವೆಂದರೆ ವಿಡಿಯೋ ಕರೆಗಳ ಕಾರಣದಿಂದಾಗಿ ಜನರು ಸುಲಭವಾಗಿ ನಂಬುತ್ತಾರೆ ಮತ್ತು ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸುತ್ತಾರೆ.
ಕಾನ್ಪುರಕ್ಕೆ ಸಂಬಂಧಿಸಿದ ಸಂಸ್ಥೆಯಾದ ದಿ ಫ್ಯೂಚರ್ ಕ್ರೈಮ್ ರಿಸರ್ಚ್ ಫೌಂಡೇಶನ್ (ಎಫ್‌ಸಿಆರ್‌ಎಫ್) ಪ್ರಕಾರ, ಇಂತಹ ಪ್ರಕರಣಗಳಲ್ಲಿ 18 ಪ್ರತಿಶತ ರಾಜಸ್ಥಾನದ ಭರತ್‌ಪುರದಿಂದ ನಡೆಯುತ್ತಿವೆ, ಆದರೆ ಮಥುರಾ ಉತ್ತರ ಪ್ರದೇಶ (ಯುಪಿ) ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ.