

WhatsApp New Feature: ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಬಳಕೆದಾರರಿಗೆ ಒಂದರ ಹಿಂದೆ ಒಂದರಂತೆ ಆಕರ್ಷಕ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿದೆ. ಮೊನ್ನೆಯಷ್ಟೆ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಹೆಚ್ಡಿ ರೆಸಲ್ಯೂಷನ್‌ನಲ್ಲಿ ಫೋಟೋಗಳನ್ನು ಕಳುಹಿಸುವ ಆಯ್ಕೆ ನೀಡಿತ್ತು.
ವಾಟ್ಸ್ಆ್ಯಪ್ ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಹೈ-ರೆಸಲ್ಯೂಷನ್‌ನಲ್ಲಿ ವಿಡಿಯೋವನ್ನು ಕಳುಹಿಸುವ ಫೀಚರ್ ಪರಿಚಯಿಸಿದೆ. ಈ ಹಿಂದೆ ಯಾರಿಗಾದರು ವಿಡಿಯೋ ಕಳುಹಿಸಿದಾಗ ಅದು ಕಂಪ್ರೆಸ್ ಆಗಿ ತನ್ನ ಕ್ವಾಲಿಟಿಯನ್ನು ಕಳೆದುಕೊಳ್ಳುತ್ತಿತ್ತು. ಆದರೀಗ ಹೆಚ್ಡಿ ಕ್ವಾಲಿಟಿಯಲ್ಲಿ ವಿಡಿಯೋ ಕಳುಹಿಸಬಹುದು.
ವಾಟ್ಸ್ಆ್ಯಪ್ ಕಾಂಟೆಕ್ಟ್ ಲಿಸ್ಟ್ನಲ್ಲಿ ಇರುವವರಿಗೆ ಹಂಚಿಕೊಳ್ಳಲು ವಿಡಿಯೋವನ್ನು ಆಯ್ಕೆಮಾಡುವಾಗ ಪರದೆಯ ಮೇಲ್ಭಾಗದಲ್ಲಿ HD ಐಕಾನ್ ಕಾಣಿಸುತ್ತಿದೆ.
ಇದನ್ನು ಒತ್ತಿದ ನಂತರ ವಾಟ್ಸ್ಆ್ಯಪ್ ಸ್ಟ್ಯಾಂಡರ್ಡ್ ಮತ್ತು ಡೀಫಾಲ್ಟ್ ಆಗಿ ವಿಡಿಯೋ ಹಂಚಿಕೊಳ್ಳುಬಹುದು. ಆಂಡ್ರಾಯ್ಡ್ ಬಳಕೆದಾರರಿಗಾಗಿ ಈ ನೂತನ ಅಪ್‌ಡೇಟ್‌ನೊಂದಿಗೆ ಈ ಫೀಚರ್ ಬಿಡುಗಡೆ ಆಗಿದೆ.
ಮುಂಬರುವ ವಾರಗಳಲ್ಲಿ, ಇದು ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. ಹೊಸ ವೈಶಿಷ್ಟ್ಯವು ಬಳಕೆದಾರರಿಗೆ 720p HD ಗುಣಮಟ್ಟದಲ್ಲಿ ವಿಡಿಯೋಗಳನ್ನು ಕಳುಹಿಸಲು ಅನುಮತಿಸುತ್ತದೆ. IANS ವರದಿಯ ಪ್ರಕಾರ, ವಾಟ್ಸ್ಆ್ಯಪ್ನ ಈ HD ವಿಡಿಯೋ ಹಂಚಿಕೆ ವೈಶಿಷ್ಟ್ಯವು ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಿದೆ.