VIDEO | ಮನೆಯ ಚಾವಣಿಯಿಂದ ಹಾವುಗಳನ್ನು ಹೊರತೆಗೆದ ಯುವತಿ.. ವಿಡಿಯೋ ನೋಡಿ

Watch the video of a young woman pulling out snakes from the ceiling of her house
Published on

ನವದೆಹಲಿ: ಹಾವನ್ನು ಕಂಡರೆ ದೂರ ಓಡುತ್ತೇವೆ. ಜಗತ್ತಿನಲ್ಲಿ ಕೆಲವು ನೂರಾರು ಜಾತಿ ಹಾವುಗಳಿವೆ. ಕೆಲವು ಹಾವುಗಳು ವಿಷರಹಿತವಾಗಿದ್ದರೆ, ಕೆಲವು ಬಗೆಯ ಹಾವುಗಳು ವಿಷಕಾರಿ. ಇಂತಹ ವಿಷಕಾರಿ ಹಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಯುವತಿಯೊಬ್ಬಳು ಮನೆಯ ಛಾವಣಿಯೊಳಗೆ ಅಡಗಿರುವ ಎರಡು ದೊಡ್ಡ ಹಾವುಗಳನ್ನು ಹೊರತೆಗೆದಿದ್ದಾಳೆ. ಈಕೆಯ ಧೈರ್ಯ ನೋಡಿ ಯಾರಿಗಾದರೂ ಬೆಚ್ಚಿ ಬೀಳಬೇಕು. ಏಕೆಂದರೆ ನಾವು ಚಿಕ್ಕ ಹಾವು ಕಂಡರೆ ಓಡಿಹೋಗುತ್ತೇವೆ. ಆದರೆ ಈ ಯುವತಿ ಧೈರ್ಯ ಮೆಚ್ಚುವಂತದ್ದಾಗಿದೆ.

ಮಹಿಳೆಯೊಬ್ಬರು ಮೇಜಿನ ಮೇಲೆ ಹತ್ತಿ ಹಾವುಗಳನ್ನು ಕೋಲಿನಿಂದ ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಂತರ ಹಾವುಗಳು ಛಾವಣಿಯಿಂದ ಹೊರಬರುತ್ತಿದ್ದಂತೆ ಮತ್ತೊಂದರ ನಂತರ ಒಂದರಂತೆ ಇನ್ನೆರಡು ಹೊರಬಂದವು. ಈ ಹಾವುಗಳು ತುಂಬಾ ಭಾರವಾಗಿವೆ.. ಅಂದರೆ ಯುವತಿಗೆ ಆ ಹಾವುಗಳ ಭಾರವನ್ನು ಸಹಿಸಲಾಗಲಿಲ್ಲ ಅಷ್ಟು ದೊಡ್ಡದಾಗಿವೆ.

ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಆಕೆಗೆ ಭಯವಿಲ್ಲವೆ? ಯುವತಿ ಚಿಕ್ಕಂದಿನಿಂದಲೂ ಹೀಗೆ ಮಾಡುತ್ತಿದ್ದಾಳಾ? ನನಗೆ ಆಘಾತವಾಯಿತು.. ಎಂದು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net