VIDEO| ಮದ್ಯದ ನಶೆಯಲ್ಲಿ ಟಂಬಲ್​ ಡ್ರೈಯರ್ ಒಳಗಿಳಿದ ಯುವತಿಯ ಪಾಡು ಹೇಳತೀರದು..!

Dryer
Published on

ಲಂಡನ್​: ಪಾನಮತ್ತ ಬ್ರಿಟಿಷ್​ ಯುವತಿಯೊಬ್ಬಳು ಟಂಬಲ್​ ಡ್ರೈಯರ್​ನಲ್ಲಿ ಸಿಲುಕಿ ಪರದಾಡಿದ ಘಟನೆ ಇಂಗ್ಲೆಂಡ್​ ಹಂಬರ್ಸೈಡ್​ ನಗರದಲ್ಲಿ ನಡೆದಿದ್ದು, ಕೊನೆಗೆ ಯುವತಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಟಿಕ್​ಟಾಕ್​ನಲ್ಲಿ ವೈರಲ್​ ಆಗಿದೆ.

ಯುವತಿಯನ್ನು ರೋಸಿ ಕೋಲ್​ (21) ಎಂದು ಗುರುತಿಸಲಾಗಿದೆ. ಈಕೆ ಯೂನಿವರ್ಸಿಟಿಯ ವಿದ್ಯಾರ್ಥಿನಿಯಾಗಿದ್ದಾಳೆ. ತನ್ನ ಸಹವಾಸಿಗಳ ಜತೆ ಸೇರಿ ಮದ್ಯ ಸೇವಿಸಿದ್ದ ರೋಸಿ, ಮದ್ಯದ ನಶೆಯಲ್ಲಿ ಟಂಬಲ್​ ಡ್ರೈಯರ್​ ಒಳಗೆ ಹೋಗಲು ಧೈರ್ಯ ಮಾಡಿ ಹೊರಬರಲಾಗದೆ ರೋಸಿ ಸಿಲುಕಿದ್ದಾಳೆ. ಹೊರಬರಲು ಸಾಕಷ್ಟು ಪ್ರಯತ್ನಿಸಿದ್ದಾಳೆ. ಫ್ರೆಂಡ್ಸ್​ ಸಹ ಯತ್ನಿಸಿ, ಸಾಧ್ಯವಾಗದಿದ್ದಾಗ. ನಿನ್ನೆ ರಾತ್ರಿ 11 ಗಂಟೆಗೆ ತುರ್ತು ಸೇವೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಹಂಬರ್ಸೈಡ್​ ಅಗ್ನಿಶಾಮಕ ಮತ್ತು ರಕ್ಷಣಾ ಸೇವಾ ಸಿಬ್ಬಂದಿ ಗಾಯಗೊಳ್ಳದಂತೆ ಸುರಕ್ಷಿತವಾಗಿ ರೋಸಿಯನ್ನು ಯಂತ್ರದಿಂದ ಬಿಡಿಸಿದ್ದಾರೆ. ಯುವತಿ ಸುಮಾರು 20 ನಿಮಿಷ ಡ್ರೈಯರ್​​ನಲ್ಲಿ ಸಿಲುಕಿದ್ದಳು. ಯಂತ್ರದಿಂದ ಹೊರಬಂದ ಬೆನ್ನಲ್ಲೇ ರೋಸಿ ತುಂಬಾ ಸಂತಸಗೊಂಡು ಕುಣಿದಾಡಿದ್ದಾಳೆ.

ಇದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ರೋಸಿ ಮತ್ತು ಆಕೆಯ ಸ್ನೇಹಿತೆ ಲೈಡಿಯಾ ದನ್ವೆಲ್ ಟಿಕ್​ಟಾಕ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ರೋಸಿ ಪರದಾಟ ನೋಡಿ ಅನೇಕರು ನಕ್ಕಿದ್ದರೆ, ಇನ್ನು ಕೆಲವರು ಎಚ್ಚರಿಕೆ ಇರಲೆಂದು ಸಲಹೆ ನೀಡಿದ್ದಾರೆ. ಸದ್ಯ ವಿಡಿಯೋ ಮಾತ್ರ ವೈರಲ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net