More

    ಕಲ್ಯಾಣ್​ ಪತ್ನಿ ಐಶ್ವರ್ಯಾ ಕುಟುಂಬದ ಆಪ್ತ ಶಿವಾನಂದ ವಾಲಿ ಮನೆಯಲ್ಲಿ ಮಾಟ-ಮಂತ್ರದ ವಸ್ತುಗಳು !

    ಬೆಳಗಾವಿ: ಖ್ಯಾತ ಸಂಗೀತ ನಿರ್ದೇಶಕ ಕೆ. ಕಲ್ಯಾಣ್​ ದಾಂಪತ್ಯದಲ್ಲಿ ಬಿರುಕು ಬಿಟ್ಟಿರುವುದು ಬಹಿರಂಗವಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಬಾಗಲಕೋಟೆಯ ಶಿವಾನಂದ ವಾಲಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಈ ಶಿವಾನಂದ ವಾಲಿ ಕಲ್ಯಾಣ್​ ಪತ್ನಿ ಐಶ್ವರ್ಯಾ ಕುಟುಂಬದ ಪರಮಾಪ್ತ. ಆತನ ಅಕೌಂಟಿಗೆ ನನ್ನ ಪತ್ನಿ, ಅತ್ತೆ, ಮಾವನ ಅಕೌಂಟ್​​ನಿಂದ 19,80000 ರೂ.ವರ್ಗಾವಣೆ ಆಗಿದೆ ಎಂದು ಕಲ್ಯಾಣ್​ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದರು. ಅದರ ಅನ್ವಯ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ತಮ್ಮ ಖಾಸಗಿ ಅಂಗಗಳ ಬಗ್ಗೆ ಮುಕ್ತವಾಗಿ ಮಾತನಾಡಿ ನೆಟ್ಟಿಗರ ಹುಬ್ಬೇರಿಸಿದ ಗೋವಾ ಬ್ಯೂಟಿ ಇಲಿಯಾನಾ..!

    ಇದೀಗ ಮತ್ತೊಂದು ವಿಚಾರ ಹೊರಬಿದ್ದಿದ್ದು, ಶಿವಾನಂದ್​ ವಾಲಿ ಮನೆಯನ್ನು ತಪಾಸಣೆ ಮಾಡಿದಾಗ ಅಲ್ಲಿ ಲಿಂಬೆ ಹಣ್ಣು ಸೇರಿ, ಮಾಟಮಂತ್ರಕ್ಕೆ ಸಂಬಂಧಪಟ್ಟ ವಸ್ತುಗಳು ಸಿಕ್ಕಿವೆ ಎಂದು ಮಾಹಿತಿ ಲಭ್ಯವಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಕೆ. ಕಲ್ಯಾಣ್​ ಕೂಡ ನನ್ನ ಅತ್ತೆ ಮನೆಯಲ್ಲಿ ಮಧ್ಯರಾತ್ರಿಯಲ್ಲಿ ಲಿಂಬೆ ಹಣ್ಣು ಇಟ್ಟು ಪೂಜೆ ಮಾಡಲಾಗುತ್ತಿತ್ತು ಎಂಬ ವಿಚಾರವನ್ನು ಹೇಳಿದ್ದಾರೆ.

    15 ವರ್ಷದ ಬಾಲಕಿ, ಯುವಕ ನೇಣಿಗೆ ಶರಣು: ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿತ್ತು ಕೊನೆಯ ಪ್ರೀತಿಯ ಸಂದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts