

ಮುಂಬೈ: ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ನಟನೆಗಿಂತ ತಮ್ಮ ದೇಹ ಸೌಂದರ್ಯದಿಂದಲೇ ಪ್ರಸಿದ್ಧಿಯಾದವರು. ಬ್ಯೂಟಿಫುಲ್ ಲುಕ್, ಸ್ಟೈಲ್, ಕ್ಯೂಟ್ ಸ್ಮೈಲ್ ಮತ್ತು ಅದ್ಭುತ ವ್ಯಕ್ತಿತ್ವದಿಂದಲೇ ಹೆಸರಾಗಿರುವ ಬರ್ಫಿ ನಟಿ, ಆಗಾಗ ಮಾದಕ ಫೋಟೋಗಳನ್ನು ಹರಿಬಿಟ್ಟು ಅಭಿಮಾನಿಗಳ ಹೃದಯದ ಬಡಿತವನ್ನು ಏರಿಸುತ್ತಿರುತ್ತಾರೆ. ಸಾಕಷ್ಟು ಬಿಕಿನಿ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಜಾಲತಾಣದಲ್ಲಿ ಕಿಚ್ಚು ಹಚ್ಚುವ ಇಲಿಯಾನಾ ಇದೀಗ ತಮ್ಮ ಖಾಸಗಿ ಅಂಗಗಳ ಬಗ್ಗೆ ಮಾತನಾಡುವ ಮೂಲಕ ಮತ್ತೊಮ್ಮೆ ಭಾರಿ ಸುದ್ದಿಯಾಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಬಿಕಿನಿ ಫೋಟೋ ಫೋಸ್ಟ್ ಮಾಡಿರುವ ಇಲಿಯಾನ, ನಾನು ಹೇಗೆ ಕಾಣುತ್ತಿದ್ದೇನೆ ಎನ್ನುವುದರ ಬಗ್ಗೆ ಯಾವಾಗಲೂ ಚಿಂತಿಸುತ್ತೇನೆ. ನನ್ನ ಸೊಂಟ ತುಂಬಾ ಅಗಲವಿದೆ. ತೊಡೆಗಳು ತುಂಬಾ ಅಲುಗಾಡುತ್ತವೆ. ಸ್ತನಗಳು ಸಾಕಷ್ಟು ದೊಡ್ಡದಾಗಿಲ್ಲ. ಮೂಗು ನೇರವಾಗಿಲ್ಲ. ಹೊಟ್ಟೆ ಸಾಕಷ್ಟು ಸಮತಟ್ಟಾಗಿಲ್ಲ. ನನ್ನ ಪೃಷ್ಠ (ನಿಂತಂಬ) ತುಂಬಾ ದೊಡ್ಡದು. ನನ್ನ ತೋಳುಗಳು ಸಹ ಕುಲುಕುತ್ತವೆ. ತುಟಿಗಳು ಸಾಕಷ್ಟು ತುಂಬಿಲ್ಲ ಎಂದು ಯೋಚಿಸುತ್ತೇನೆಂದು ಬರೆದುಕೊಂಡಿದ್ದಾರೆ.
ಮುಂದುವರಿದು ನಾನು ಸಾಕಷ್ಟು ಎತ್ತರವಾಗಿಲ್ಲ. ಮುದ್ದಾಗಿಯೂ ಇಲ್ಲ. ತುಂಬಾ ತುಂಟಿಯೇನಲ್ಲ. ಸ್ಮಾರ್ಟ್ ಕೂಡ ಅಲ್ಲ. ಇನ್ನು ತುಂಬಾ ಪರ್ಫೆಕ್ಟ್ ಅಂತೂ ಇಲ್ಲ. ಎಂದಿಗೂ ನಾನು ಪರಿಪೂರ್ಣ ಎಂದು ಅರ್ಥೈಸಿಕೊಳ್ಳಲಿಲ್ಲ ಎಂದು ಇಲಿಯಾನಾ ಸುದೀರ್ಘವಾಗಿ ತಮ್ಮ ದೇಹದ ಬಗ್ಗೆ ಬರೆದುಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಹುಬ್ಬೇರಿಸಿದೆ.
ಸದ್ಯ ಗೋವಾದಲ್ಲಿರುವ ಇಲಿಯಾನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ ತಮ್ಮ ಮುಂದಿನ ತೆಲುಗು ಸಿನಿ ಪ್ರಾಜೆಕ್ಟ್ಗಳ ಬಗ್ಗೆ ಇಲಿಯಾನಾ ಘೋಷಣೆ ಮಾಡಬೇಕಿದೆ. (ಏಜೆನ್ಸೀಸ್)