15 ವರ್ಷದ ಬಾಲಕಿ, ಯುವಕ ನೇಣಿಗೆ ಶರಣು: ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿತ್ತು ಕೊನೆಯ ಪ್ರೀತಿಯ ಸಂದೇಶ

Suicide
Published on

ಬಾಗಲಕೋಟೆ: ಅಪ್ರಾಪ್ತೆ ಹಾಗೂ ಯುವಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಧೋಳ ನಗರದ ಬಸವ ನಗರದಲ್ಲಿ ನಡೆದಿದೆ.

ಆನಂದ (23) ಮತ್ತು 15 ವರ್ಷದ ಬಾಲಕಿ ಮೃತ ದುರ್ದೈವಿಗಳು. ಆನಂದ ವಾಸವಿದ್ದ ಬಸವ ನಗರದ ಬಾಡಿಗೆ ರೂಮಿನಲ್ಲಿ ಇಬ್ಬರು ನೇಣಿಗೆ ಶರಣಾಗಿದ್ದಾರೆ. ಮುಧೋಳ‌ ನಗರದ ರನ್ನ ವೃತ್ತದ ಬಳಿಯ ಬೇಕರಿಯಲ್ಲಿ ಆನಂದ ಕೆಲಸ ಮಾಡುತ್ತಿದ್ದ.

ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಮುಧೋಳ ತಾಲ್ಲೂಕಿನ ಒಂದೇ ಗ್ರಾಮದವರು. ಇದೀಗ ಆತ್ಮಹತ್ಯೆಗೆ ಶರಣಾಗಿರುವುದು ಇಬ್ಬರ ಕುಟುಂಬಕ್ಕೂ ಆಘಾತವಾಗಿದೆ. ಆದರೆ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸಾಯುವ ಮುನ್ನ ಯುವಕ ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್ ಹಾಕಿದ್ದು, ಆಲ್ ಫ್ರೆಂಡ್ಸ್​ ಮಿಸ್ ಯು, ಅವ್ವ-ಅಪ್ಪ ಮಿಸ್ ಯು ಎಂದು ಬರೆದುಕೊಂಡಿದ್ದಾನೆ. ಸ್ಥಳಕ್ಕೆ ಮುಧೋಳ‌ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net