

ಕೋಲಾರ/ಬಂಗಾರಪೇಟೆ: ಬೆಂಗಳೂರು-ಚೆನ್ನೈ ಕಾರಿಡಾರ್ನಲ್ಲಿ ಸೋಮವಾರ ಸಂಭವಿಸಿದ ಅಪಘಾತಕ್ಕೆ ಹೆದ್ದಾರಿ ಪ್ರಾಧಿಕಾರದವರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ವ್ಯಕ್ತವಾಗಿದೆ.
ಕಾರ್ಯಕ್ರಮವೊಂದಕ್ಕೆ ಅಡುಗೆ ಮಾಡಲು ಆಗಮಿಸಿದ್ದ ಬೆಂಗಳೂರಿನ ಗಿರಿನಗರದ ಖಾಸಗಿ ಕ್ಯಾಟರಿಂಗ್ನ 25 ಮಂದಿ ಕೆಲಸ ಮುಗಿಸಿ ವಾಪಸ್ ತೆರಳಬೇಕಾದರೆ ಬಂಗಾರಪೇಟೆ ತಾಲೂಕಿನ ಕಲ್ಕೇರಿ ಸಮೀಪ ಕಾರಿಡಾರ್ ರಸ್ತೆ ಎನ್ಎ&7ನಲ್ಲಿ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ.
ಹೆದ್ದಾರಿಯಲ್ಲಿ ಅಪಘಾತಗಳು ಅಥವಾ ಯಾವುದೇ ಅನಾಹುತ ಸಂಭವಿಸಿದಾಗ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಹೋಗಲು ಹೆದ್ದಾರಿಯಲ್ಲಿ ಆಯ್ದ ಕಡೆಗಳಲ್ಲಿ ಅವಕಾಶ ಮಾಡಿಕೊಡಬೇಕು. ಆದರೆ, ಆಂಬುಲೆನ್ಸ್ ಹೋಗುವ ಜಾಗವನ್ನೇ ಗಣ್ಯರು ಕಾರ್ಯಕ್ರಮಕ್ಕೆ ಹೋಗಿ ಬರಲು ಉಪಯೋಗಿಸಲಾಗಿತ್ತು. ಅದೇ ಜಾಗದಲ್ಲಿ ಕ್ಯಾಟರಿಂಗ್ ಟೆಂಪೋ ಚಾಲಕ ಬೆಂಗಳೂರಿನ ಕಡೆಗೆ ಹೋಗಲು ತಿರುವು ಪಡೆಯುತ್ತಿದ್ದಾಗ ತಮಿಳುನಾಡು ಕಡೆಯಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಸರಕು ಸಾಗಣೆ ವಾಹನ ಹಿಂಬರಿಯಿಂದ ಡಿಕ್ಕಿಯಾಗಿದೆ. ಸೂಚನಾ ಲಕ ಅಳವಡಿಸದೆ ಇರುವುದು ಅಪಘಾತಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಟೆಂಪೋಚಾಲಕ ಶಿವರಾಜ್, ಆಂಬುಲೆನ್ಸ್ ಚಾಲಕ ವಿಕ್ರಮ್ ಪಾಲ್ ಸಿಂಗ್ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಭದ್ರತಾ ಸಿಬ್ಬಂದಿ ಸುರೇಂದ್ರ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದೇ ಜಾಗದಲ್ಲಿ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಆಂಬುಲೆನ್ಸ್ಗೆ ಟೆಂಪೋ ಗುದ್ದಿದ್ದು ಆಂಬುಲೆನ್ಸ್ ಚಾಲಕನ ಸಾವಿಗೆ ಕಾರಣವಾಗಿವೆ. ಸರಕು ಸಾಗಣೆ ವಾಹನ ಚಾಲಕನ ವಿರುದ್ಧ ದೂರು ದಾಖಲಾಗಿದೆ.
ಗಾಯಾಳುಗಳು
ಕುಂದಾಪುರ ಗಣೇಶ್, ಕುಂದಾಪುರ ಪೃಥ್ವಿರಾಜ್, ಸೊರಭ ಗಜೇಂದ್ರ, ಕೊಲ್ಲೂರು ದೀಲಿಪ್, ಉಡುಪಿ ಅಶೋಕ್, ಉಡುಪಿ ವಿಜಯ ಕುಮಾರ್, ಕುಂದಾಪುರ ಸುಭಾಷ್.ಸುಂದರಮ್ಮ, ದಿನೇಶ್, ರಾಜೇಶ್ವರಿ, ಮನೋಹರ್, ವಸಂತ, ಮಾರಮ್ಮ, ಕಂಚನಾ, ಕೃಷ್ಣ, ತಿಪ್ಪೇಸ್ವಾಮಿ, ಸುಭಾಷ್, ಮುತ್ತುರಾಜ್, ಹರೀಶ್, ವಿಜಯ್ ಕುಮಾರ್, ಅಕ್ಷಯ್, ಕುಮಾರ್, ಶಕುಂತಲ.ಗಾಯಗೊಂಡಿರುವ ಪೈಕಿ ಬಹುತೇಕರು ಕುಂದಾಪುರ, ಉಡುಪಿ, ಬೆಂಗಳೂರು ಹಾಗೂ ತಮಿಳುನಾಡು ಮೂಲದವರು ಎಂದು ತಿಳಿದು ಬಂದಿದ್ದು, ಬಂಗಾರಪೇಟೆ, ಕೆಜಿಎ್, ಕೋಲಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳೇ ಸಂಬಂಧಿಕರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಕೆಲವರು ಈಗಾಗಲೇ ಆಗಮಿಸಿದ್ದು, ಇನ್ನು ಕೆಲವರು ಬರುತ್ತಿದ್ದಾರೆ.