

| ಮೃತ್ಯುಂಜಯ ಕಪಗಲ್ ಬೆಂಗಳೂರು
ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ರಾಜ್ಯದ 14 ಲೋಕಸಭೆ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಮುಗಿದ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಮತಬೇಟೆಯ ಪ್ರಚಾರ ತೀವ್ರಗೊಳಿಸಿವೆ. ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ, ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ನಡುವೆ ಏರ್ಪಟ್ಟಿರುವ ಜಿದ್ದಾಜಿದ್ದಿ ಕುತೂಹಲ ಮೂಡಿಸಿದೆ.
ದಶಕದ ಆಡಳಿತ ಪೂರ್ಣಗೊಳಿಸಿದ ನಂತರವೂ ಮೋದಿ ಅಲೆಯ ವರ್ಚಸ್ಸು ಹೆಚ್ಚಿದೆ ಎಂದು ಹೇಳಿಕೊಳ್ಳುತ್ತಿರುವ ಕೇಸರಿ ಪಡೆ ಜನಮತ ಪರೀಕ್ಷೆಯಲ್ಲಿ ತೇರ್ಗಡೆ ಯಾಗುವ ಅಚಲ ವಿಶ್ವಾಸದಲ್ಲಿದೆ. ನಿಚ್ಚಳ ಬಹುಮತ
ದೊಂದಿಗೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೇರಿ ರುವುದರಿಂದ ಗ್ಯಾರಂಟಿ ಸಹಿತ 10 ತಿಂಗಳ ಆಡಳಿತವೈಖರಿಯಿಂದಾಗಿ ಜನಮತ ಮತ್ತೆ ತಮ್ಮ ಪರವಾಗಿ ಇರಲಿದೆ ಎಂದು ಕೈ ಪಾಳೆಯ ನಂಬಿದೆ.
ಏಕಾಂಗಿ, ಜಂಟಿ ಹೋರಾಟ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲಿದೆ. 28 ಅಭ್ಯರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಚಾರದ ಟ್ರಂಪ್ ಕಾರ್ಡ್ ಆಗಲಿದ್ದಾರೆ. ಜತೆಗೆ ಪಕ್ಷದ ರಾಷ್ಟ್ರೀಯ ನಾಯಕರು, ಸಿನಿ ತಾರೆಯರು ಸೇರಿ ಪ್ರಭಾವಿ ನಾಯಕರ 40 ಜನ ಸ್ಟಾರ್ ಪ್ರಚಾರಕರು ಮತಬೇಟೆಗೆ ಇಳಿಯಲಿದ್ದಾರೆ. ಮತ್ತೊಂದೆಡೆ ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷಗಳು ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವರ್ಚಸ್ಸನ್ನು ನಂಬಿವೆ. ಇವರಿಬ್ಬರ ಖ್ಯಾತಿಯ ಅಲೆ ಪರಿಣಾಮಬೀರಿ, ಗುರಿ ತಲುಪಲು ನೆರವಾಗಲಿವೆ ಎಂದೇ ದೋಸ್ತಿ ಪಡೆ ನಂಬಿದೆ. ಇನ್ನು ಬಿಜೆಪಿ ರಾಷ್ಟ್ರೀಯ ನಾಯಕರು, ಮಾಜಿ ಸಿಎಂಗಳಾದ ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಒಳಗೊಂಡು 40 ಜನ ಸ್ಟಾರ್ ಪ್ರಚಾರಕರ ರಾಜ್ಯ ಪ್ರವಾಸದ ಪಟ್ಟಿ ಸಿದ್ಧಗೊಂಡಿದೆ.
ಮೋದಿ ಕಾಲದಲ್ಲಿ ಆದ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳಿಗೆ ನೆಮ್ಮದಿ ನೀಡಲು ಐದು ಗ್ಯಾರಂಟಿ ಜಾರಿ ಮಾಡಿದೆವು. ಪ್ರತೀ ಕುಟುಂಬಕ್ಕೆ ನಾಲ್ಕರಿಂದ ಆರು ಸಾವಿರ ರೂ. ಉಳಿತಾಯವಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಾಯಿತು.
1. ಭಾರತೀಯರ ಬದುಕು ಸುಧಾರಿಸಿದೆ
2. ದೇಶ ಭದ್ರತೆ, ಸುಸ್ಥಿರ ಅಭಿವೃದ್ಧಿ ಕಂಡಿದೆ
3. ಪ್ರಧಾನಿ ಮೋದಿ ಗ್ಯಾರಂಟಿಗಳು ಶಾಶ್ವರ
4. ಯುಪಿಎ ಕಾಲದ ಹಗರಣಗಳ ಕಪು್ಪಚುಕ್ಕೆ
5. ವಿಶ್ವ ರಾಷ್ಟ್ರಗಳ ಜತೆಗಿನ ಬಾಂಧವ್ಯ ಹೆಚ್ಚಳ
1. ಜನರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬರೆ
2. ಪಂಚ ಗ್ಯಾರಂಟಿ ಜನಜೀವನಕ್ಕೆ ನೆರವಾಗಿದೆ
3. ಬಿಜೆಪಿಗೆ ಬದುಕು ಬೇಡ, ಭಾವನೆ ಜತೆ ಆಟ
4. ಕೇಂದ್ರದ ವಿರುದ್ಧ ಅನುದಾನ ತಾರತಮ್ಯ ಸಮರ
5. 14 ಕ್ಷೇತ್ರಗಳ ಪೈಕಿ 8 ಒಕ್ಕಲಿಗರಿಗೆ ಟಿಕೆಟ್ ಸಿಕ್ಕಿದೆ
| ಸಿದ್ದರಾಮಯ್ಯ ಸಿಎಂಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ವಾಸ್ತವವೆಂದರೆ ಈ ಯೋಜನೆಗಳಿಗೆ ಕೋಟಿಗಟ್ಟಲೆ ಸಾಲ ಮಾಡಿ ಕರ್ನಾಟಕವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ.| ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ