ಗ್ಲೋಬಲ್ ಫಾರ್ಚೂನ್ 500 ಪಟ್ಟಿಯಲ್ಲಿ ವಾಲ್​ವಾರ್ಟ್ ನಂ.1; ರಿಲಯನ್ಸ್ ಸೇರಿ ಭಾರತದ 9 ಕಂಪನಿಗಳಿಗೂ ಸ್ಥಾನ

mukesh ambani
Published on

ನವದೆಹಲಿ: 2025ರ ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ದೇಶದ ಅತ್ಯುನ್ನತ ಕಂಪನಿ ಎಂಬ ಹೆಗ್ಗಳಿಕೆಯನ್ನು ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಉಳಿಸಿಕೊಂಡಿದೆ. ಈ ಸಲದ ಪಟ್ಟಿಯಲ್ಲಿ ರಿಲಯನ್ಸ್ 88ನೇ ಸ್ಥಾನದಲ್ಲಿದೆ. 2024ರಲ್ಲಿ 86ನೇ ಸ್ಥಾನದಲ್ಲಿತ್ತು. ಅಮೆರಿಕದ ವಾಲ್​ವಾರ್ಟ್ ವಿಶ್ವದ ಅಗ್ರಗಣ್ಯ ಕಂಪನಿಯಾಗಿ ಮುಂದುವರಿದಿದ್ದು, ಅಮೆಜಾನ್ 2ನೇ ಸ್ಥಾನದಲ್ಲಿದೆ. ಮೊದಲ 10 ಸ್ಥಾನಗಳಲ್ಲಿ 3 ಚೀನಾ ಕಂಪನಿಗಳಿವೆ. ಸೌದಿಯ ಅರಾಮ್ಕೊ 4ನೇ ಸ್ಥಾನದಲ್ಲಿದ್ದರೆ, ಆಪಲ್ 8ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿರುವ ಭಾರತದ 9 ಕಂಪನಿಗಳು ಮತ್ತು ಅವುಗಳ ಸ್ಥಾನ ಇಂತಿವೆ. ಎಲ್​ಐಸಿ (95), ಐಒಸಿ (127), ಎಸ್​ಬಿಐ (163), ಎಚ್​ಡಿಎಫ್​ಸಿ ಬ್ಯಾಂಕ್ (258), ಒಎನ್​ಜಿಸಿ (181) ಟಾಟಾ ಮೋಟರ್ಸ್ (283), ಬಿಪಿಸಿಎಲ್ (285), ಐಸಿಐಸಿಐ ಬ್ಯಾಂಕ್ (464).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net