ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

SLEEP FINAL
Published on

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದು ಮನೆಯಲ್ಲಿ ಹಿರಿಯರು ಹೇಳುತ್ತಾರೆ.  ಹೀಗೆ ಮುಂಜಾನೆ ಬೇಗ ಏಳುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.. 

ಬೆಳಗ್ಗೆ ಬೇಗ ಏಳುವುದರಿಂದ ವ್ಯಾಯಾಮ ಮತ್ತು ನಡಿಗೆಗೆ ಸಾಕಷ್ಟು ಸಮಯ ಸಿಗುತ್ತದೆ. ಇದು ಬೊಜ್ಜು ಕಡಿಮೆ ಮಾಡಲು ಮತ್ತು ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. 
ಬೆಳಗ್ಗೆ ಬೇಗ ಎದ್ದರೆ ರಾತ್ರಿ ಮಲಗಲು ಕಷ್ಟಪಡಬೇಕಾಗಿಲ್ಲ. ಏಕೆಂದರೆ ಬೆಳಗ್ಗೆ ಬೇಗ ಏಳುವುದು ಎಂದರೆ ರಾತ್ರಿ ಬೇಗ ಮಲಗುವುದು. ಇದು ನಿಮ್ಮನ್ನು ಆರೋಗ್ಯವಾಗಿಡುತ್ತದೆ.

ಇತ್ತೀಚಿನ ದಿನಗಳಲ್ಲಿ ಒತ್ತಡ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಇದರಿಂದ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯವೂ ಹಾಳಾಗುತ್ತದೆ. ಮುಂಜಾನೆ ಬೇಗ ಎದ್ದು ವ್ಯಾಯಾಮ ಮಾಡುವುದರಿಂದ ದೇಹದಲ್ಲಿನ ಹಲವು ಅಂಗಾಂಗಗಳು ಸುಧಾರಿಸುತ್ತವೆ ಎಂದು ಹೇಳಲಾಗುತ್ತದೆ.

Sleeping On The Floor

ಬೆಳಗ್ಗೆ ಬೇಗ ಏಳುವುದರಿಂದ ದೇಹದಲ್ಲಿ ರಕ್ತ ಸಂಚಾರ ಸುಧಾರಿಸುತ್ತದೆ. ನಿಮ್ಮ ಹೃದಯವು ಆರೋಗ್ಯವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಬೆಳಿಗ್ಗೆ ಯೋಗ ಅಥವಾ ವ್ಯಾಯಾಮ ಮಾಡಲು ಉತ್ತಮ ಸಮಯ. ಬೆಳಿಗ್ಗೆ ವಾತಾವರಣದಲ್ಲಿ ತಾಜಾ ಗಾಳಿ ಇರುತ್ತದೆ. ಇದು ಶ್ವಾಸಕೋಶ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.

ಬೆಳಗ್ಗೆ ಬೇಗ ಏಳುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಹೊಟ್ಟೆಯೂ ಸ್ವಚ್ಛವಾಗಿದೆ ಎಂದು ಹೇಳಲಾಗುತ್ತದೆ. ಹಾಗಾಗಿ ಮುಂಜಾನೆ ಬೇಗ ಏಳುವ ಅಭ್ಯಾಸವನ್ನು ರೂಢಿಸಿಕೊಂಡರೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net