ಸಂಗೀತ ನಿರ್ದೇಶಕ ವಾಜಿದ್​ ತಾಯಿಗೆ ಕರೊನಾ ಪಾಸಿಟಿವ್​!

corona new
Published on

ನವದೆಹಲಿ: ಬಾಲಿವುಡ್​ನ ಸಂಗೀತ ನಿರ್ದೇಶಕ, ಗಾಯಕ ದಿ. ವಾಜಿದ್​ ಖಾನ್​ ಅವರ ತಾಯಿಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಕಿಡ್ನಿ ಸೋಂಕು ಸೇರಿ ಇತರ ಸಮಸ್ಯೆಯಿಂದ ಬಳಲುತ್ತಿದ್ದ ವಾಜಿದ್​ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗನನ್ನು ನೋಡಿಕೊಳ್ಳಲೆಂದು ತಾಯಿ ರಾಜಿನಾ ಖಾನ್ ಆಸ್ಪತ್ರೆಯಲ್ಲೇ ಇದ್ದರು. ಆ ವೇಳೆ ತಾಯಿಗೆ ಸೋಂಕು ತಗುಲಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಾಜೀದ್​ಗೆ ಕಿಡ್ನಿ ಸಮಸ್ಯೆ ಇತ್ತು. ಜತೆಗೆ ಹೃದ್ರೋಗವೂ ಕಾಣಿಸಿಕೊಂಡು ಚಿಕಿತ್ಸೆ ಫಲಿಸದೆ ಸೋಮವಾರ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು ಎಂದು ಅವರ ಸಹೋದರ ಸಾಜಿದ್ ತಿಳಿಸಿದ್ದಾರೆ. ಅಂದು ಮಧ್ಯಾಹ್ನವೇ ವಾಜೀದ್​ ಅಂತ್ಯಸಂಸ್ಕಾರ ನೆರವೇರಿಸಿದ್ದು, ಕುಟುಂಬಸ್ಥರು ಮತ್ತು ಆಪ್ತರು ಸೇರಿ 20 ಮಂದಿಯಷ್ಟೇ ಪಾಲ್ಗೊಂಡಿದ್ದರು ಎಂದು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net