ದೆಹಲಿ ವಿಧಾನಸಭಾ ಚುನಾವಣೆ: 9ಗಂಟೆ ಹೊತ್ತಿಗೆ ಶೇ.1.77 ಮತದಾನ, ಕೆಲವೆಡೆ ಇವಿಎಂ ಸಮಸ್ಯೆ

Delhi Electin 8 Feb 20
Published on

ನವದೆಹಲಿ: ದೆಹಲಿ ವಿಧಾನ ಸಭಾ ಚುನಾವಣೆ ಮತದಾನ ಬೆಳಗ್ಗೆ 9ಗಂಟೆಯೊಷ್ಟತ್ತಿಗೆ ಶೇ. 1.77ರಷ್ಟಾಗಿದೆ.

ಈಗಾಗಲೇ ಚಾಂದನಿ ಚೌಕ್​ ಕಾಂಗ್ರೆಸ್​ ಅಭ್ಯರ್ಥಿ ಅಲ್ಕಾ ಲಿಂಬಾ, ಬಿಜೆಪಿ ನಾಯಕಿ ಮನೇಕಾ ಗಾಂಧಿ, ಸಂಸದ ಪರ್ವೇಶ್​ ವರ್ಮಾ, ಸಂಸದೆ ಮೀನಾಕ್ಷಿ ಲೇಖಿ, ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಮತ್ತಿತರರು ತಮ್ಮ ಕುಟುಂಬದೊಂದಿಗೆ ಆಗಮಿಸಿ ವೋಟ್​ ಹಾಕಿದ್ದಾರೆ.

ಬಾಲಿವುಡ್​ ನಟಿ ತಾಪ್ಸಿ ಪನ್ನು ತಮ್ಮ ಕುಟುಂಬದವರೊಂದಿಗೆ ತೆರಳಿ ವೋಟು ಹಾಕಿದ್ದಾರೆ. ಬಳಿಕ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ಪನ್ನು ಪರಿವಾರ ಮತ ಚಲಾವಣೆ ಮಾಡಿದೆ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

ಯಮುನಾ ವಿಹಾರ್ದ ಸಿ10 ಬ್ಲಾಕ್​, ಸರ್ದಾರ್ ಪಟೇಲ್​ ವಿದ್ಯಾಲಯ ಬೂತ್​ ನಂಬರ್​ 114 ರಲ್ಲಿ ಇವಿಎಂ ಸಮಸ್ಯೆ ಕಾಣಿಸಿಕೊಂಡಿದೆ. ಚುನಾವಣಾ ಆಯೋಗದ ಟೆಕ್ನಿಕಲ್​ ತಂಡದವರು ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net