ಮತದಾರರ ಗುರುತಿನ ಚೀಟಿ ವಿವಾದ; ತೇಜಸ್ವಿ ಯಾದವ್​ಗೆ ಚುನಾವಣಾ ಆಯೋಗ ನೋಟಿಸ್| Tejashwi Yadav

Tejashwi Yadav
Published on

Tejashwi Yadav: ಬಿಹಾರ ಚುನಾವಣಾ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರೇ ಇಲ್ಲ ಎಂದು ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದ ಆರ್​ಜೆಡಿ ನಾಯಕ ಮತ್ತು ಬಿಹಾರ ವಿಧಾನಸಭೆ ವಿಪಕ್ಷ ನಾಯಕ ತೇಜಸ್ವಿ ಯಾದವ್​ಗೆ ಭಾನುವಾರ(ಆಗಸ್ಟ್ 3) ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ತೇಜಸ್ವಿ ಯಾದವ್ ಅವರು RAB0456228 ಮತ್ತು RAB2916120 ಎಂಬ ಎರಡು ವಿಭಿನ್ನ EPIC ಸಂಖ್ಯೆಗಳನ್ನು ಹೊಂದಿರುವುದನ್ನು ಕಂಡುಕೊಂಡ ಬಳಿಕ ಕಂಡುಬಂದ ಆಯೋಗ ನೋಟಿಸ್ ಜಾರಿ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಉಲ್ಲೇಖಿಸಿದ್ದ EPIC ಸಂಖ್ಯೆ RAB2916120 ಅನ್ನುಆಯೋಗ ಅಧಿಕೃತವಾಗಿ ನೀಡಿಲ್ಲ. ಹೆಚ್ಚಿನ ತನಿಖೆಗಾಗಿ ಕಾರ್ಡ್​ನ್ನು ಹಸ್ತಾಂತರಿಸುವಂತೆ ಹೇಳಿದೆ.

ತೇಜಸ್ವಿ ಆರೋಪವನ್ನು ಪರಿಗಣಿಸಿದ್ದ ಆಯೋಗ ಈ ಬಗ್ಗೆ ವಿಚಾರಣೆ ಮಾಡಿ, "ಬಿಹಾರದ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ಗ್ರಂಥಾಲಯ ಕಟ್ಟಡದ 204 ನೇ ಮತಗಟ್ಟೆಯ ಸರಣಿ ಸಂಖ್ಯೆ 416 ರಲ್ಲಿ ನಿಮ್ಮ ಹೆಸರನ್ನು ಉಲ್ಲೇಖಿಸಲಾಗಿದೆ, ಅದರ EPIC ಸಂಖ್ಯೆ RAB0456228 ಎಂದು ನೋಟಿಸ್​ನಲ್ಲಿ ತಿಳಿಸಿದೆ.

ತೇಜಸ್ವಿ ಯಾದವ್ ಹೇಳಿದ್ದೇನು?

ಶನಿವಾರ ಬಿಹಾರದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವಿರೋಧಿಸಿ ಸುದ್ದಿಗೋಷ್ಠಿ ನಡೆಸಿದ್ದ ತೇಜಸ್ವಿ ಯಾದವ್, "ಬಿಹಾರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ. ಎಪಿಕ್ ಸಂಖ್ಯೆ ಹಾಕಿ ನೋಡಿದ್ರೆ ನನ್ನ ಹೆಸರನ್ನು ತೋರಿಸುತ್ತಿಲ್ಲ" ಎಂದು ಆರೋಪಿಸಿದ್ದರು.

ಎಲ್​ಇಡಿ ಪರದೆಯಲ್ಲಿ ಬಹಿರಂಗವಾಗಿ ಆನ್​ಲೈನ್​ ತಮ್ಮ ಎಪಿಕ್ ಸಂಖ್ಯೆ ಹಾಕಿ ತಮ್ಮ ಮತದಾರರ ಗುರುತಿನ ಚೀಟಿಯನ್ನು ಹುಡುಕಾಟವನ್ನು ಮಾಡಿದ್ದರು. ತೇಜಸ್ವಿ ಹಾಕಿದ್ದ ಎಪಿಕ್​ ನಂಬರ್​ನಲ್ಲಿ ಯಾವುದೇ ದಾಖಲೆ ಇಲ್ಲ ಎಂದು ತೋರಿಸಿತ್ತು. ಈಗ ನಾನು ನೋಡಿ ನಾನು ಮತದಾರರಾಗಿ ನೋಂದಾಯಿತರಾಗಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನನ್ನು ಅನರ್ಹಗೊಳಿಸಲಾಗುತ್ತದೆ. ಮುಂದೆದ ನನ್ನನ್ನು ಈ ದೇಶದ ನಾಗಕರಿನಾಗಿ ಪರಿಗಣಿಸುವುದನ್ನು ನಿಲ್ಲಿಸಲುಬಹುದು ಎಂದು ಕಿಡಿಕಾರಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net