ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಬಿಜೆಪಿಗೆ ಮತ ನೀಡಿ

Vote for BJP to make Modi PM again
ಬಾದಾಮಿಯಲ್ಲಿ ನಡೆದ ಬಿಜೆಪಿ, ಜೆಡಿಎಸ್ ಸಮನ್ವಯ ಸಮಿತಿ ಕಾರ್ಯಕರ್ತರ ಸಮಾವೇಶವನ್ನು ಬಿಜೆಪಿ ಅಭ್ಯರ್ಥಿ ಪಿ.ಸಿ ಗದ್ದಿಗೌಡರ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಹನುಮಂತ ಮಾವಿನಮರದ, ರಾಜಶೇಖರ ಶೀಲವಂತರ, ಬಿ.ಪಿ. ಹಳ್ಳೂರ, ನಾಗರಾಜ ಕಾಚಟ್ಟಿ ಇತರರಿದ್ದರು.
Published on

ಬಾದಾಮಿ: ದೇಶದ ಸುಭದ್ರತೆಗೆ, ಅಭಿವೃದ್ಧಿಗೆ ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗುವುದು ಅನಿವಾರ್ಯ. ನೀವು ನನಗೆ ಮತ ನೀಡಿ ಗೆಲ್ಲಿಸಿದರೆ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗುತ್ತಾರೆ ಹೀಗಾಗಿ ಎಲ್ಲರೂ ಬಿಜೆಪಿಗೆ ಮತ ನೀಡಿ ನನ್ನನ್ನು ಗೆಲ್ಲಿಸಿ ಎಂದು ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಮನವಿ ಮಾಡಿದರು.

ನಗರದ ಹೊರ ವಲಯದ ಎಪಿಎಂಸಿ ಮೈದಾನದಲ್ಲಿ ನಡೆದ ಬಿಜೆಪಿ, ಜೆಡಿಎಸ್ ಪಕ್ಷಗಳ ಕಾರ್ಯಕರ್ತರ ತಾಲೂಕು ಸಮನ್ವಯ ಸಮಿತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಇದು ನನ್ನ ಚುನಾವಣೆಯಲ್ಲ. ದೇಶದ ಚುನಾವಣೆಯಾಗಿದೆ. ಮೋದಿಜಿ ಅವರ ವಿಕಸಿತ ಭಾರತದ ಕನಸು ನನಸಾಗುತ್ತಿದೆ. ಇದಕ್ಕೆ ಶಕ್ತಿ ತುಂಬಲು ನನಗೆ ಮತ ನೀಡಿ ಗೆಲ್ಲಿಸಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಮಾತನಾಡಿ, ರಾಷ್ಟ್ರ, ರಾಜ್ಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ನಾವೂ ಬಾಗಲಕೋಟೆ ಜಿಲ್ಲಾ ಮತ್ತು ಬಾದಾಮಿ ತಾಲೂಕಿನಲ್ಲಿಯೂ ಸಮನ್ವಯತೆಯಿಂದ ಮೈತ್ರಿ ಧರ್ಮ ಪಾಲಿಸಿಕೊಂಡು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅವರನ್ನು ಗೆಲ್ಲಿಸುವ ಸಂಕಲ್ಪ ಮಾಡೋಣ ಎಂದರು. ಮೈತ್ರಿ ಧರ್ಮ ಪಾಲಿಸುವುದು ಕೇವಲ ನಾಯಕರ ಕರ್ತವ್ಯ ಮಾತ್ರವಲ್ಲ, ಕಾರ್ಯಕರ್ತರದ್ದೂ ಆದ್ಯ ಕರ್ತವ್ಯವಾಗಿದೆ. ಇದನ್ನು ಅರಿತುಕೊಂಡಿರುವ ಎರಡು ಪಕ್ಷದ ಕಾರ್ಯಕರ್ತರು ಸ್ಥಳೀಯ ಬೂತ್‌ಮಟ್ಟದಿಂದ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಜಂಟಿಯಾಗಿ ಶ್ರಮಿಸಬೇಕು ಎಂದರು.

ಮಾಜಿ ಶಾಸಕ ರಾಜಶೇಖರ ಶೀಲವಂತರ, ಬಿಜೆಪಿ ಮಂಡಲ ಅಧ್ಯಕ್ಷ ನಾಗರಾಜ ಕಾಚಟ್ಟಿ ಮಾತನಾಡಿ, ನಾಲ್ಕು ದಶಕಗಳ ಗದ್ದಿಗೌಡರ ಅವರ ರಾಜಕೀಯ ಜೀವನದಲ್ಲಿ ನಾಲ್ಕು ಬಾರಿ ಸಂಸದರಾಗಿ ಲೋಕಸಭಾ ಕ್ಷೇತ್ರಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ. ಮತ್ತು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಈ ಚುನಾವಣೆ ನಮಗೆ ಸ್ವಾಭಿಮಾನದ ಚುನಾವಣೆಯಾಗಿದೆ. ಹೀಗಾಗಿ ಸ್ವಕ್ಷೇತ್ರ ಬಾದಾಮಿಯಿಂದ ಗದ್ದಿಗೌಡರಿಗೆ ಲಕ್ಷಕ್ಕೂ ಅಧಿಕ ಮತಗಳನ್ನು ಕೊಟ್ಟು ಗೆಲ್ಲಿಸೋಣ ಎಂದರು.

ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಿ.ಪಿ. ಹಳ್ಳೂರ, ಜೆಡಿಎಸ್ ತಾಲೂಕು ಅಧ್ಯಕ್ಷ ಪ್ರಕಾಶ ಗಾಣಿಗೇರ, ಮಹೇಶ ಬಿಜಾಪೂರ ಮಾತನಾಡಿದರು. ಎ್.ಆರ್. ಪಾಟೀಲ, ಎಂ.ಎಸ್. ಹಿರೇಹಾಳ, ವೀರಣ್ಣ ಹಳೇಗೌಡರ, ಯಲ್ಲಪ್ಪ ಕಲಾದಗಿ, ಮುತ್ತು ಉಳ್ಳಾಗಡ್ಡಿ, ಬಸವರಾಜ ಬೂತಾಳಿ, ಪರಸಪ್ಪ ನಾಯ್ಕರ, ಭಾಗ್ಯಾ ಉದ್ನೂರ, ಮಹಾಂತೇಶ ತಳವಾರ, ಶೇಖಾ, ಜಯಶ್ರೀ ದಾಸಮನಿ, ಚೇತನ ಕತ್ತಿಕೈ ಇತರರಿದ್ದರು. ಗುಡ್ಡದ ಮಲ್ಲಾಪೂರ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net