ಚುನಾವಣಾ ಅಕ್ರಮ; ನಗದು ಸೇರಿ 288 ಕೋಟಿ ಮೌಲ್ಯದ ವಸ್ತು ವಶ

k54g681_eci_625x300_27_October_23.jpg
Published on

ಬೆಂಗಳೂರು: ಬಳ್ಳಾರಿಯಲ್ಲಿ ಭಾನುವಾರ 5.60 ಕೋಟಿ ನಗದು, 2.06 ಕೋಟಿ ಮೌಲ್ಯದ 3 ಕೆಜಿ ಚಿನ್ನ ಮತ್ತು 68 ಕೆಜಿ ಬೆಳ್ಳಿ, 103 ಕೆಜಿ ಹಳೆಯ ಬೆಳ್ಳಿ ಒಳಗೊಂಡಂತೆ ನೀತಿ ಸಂಹಿತೆ ಉಲ್ಲಂಘನೆಯಡಿ ಇದುವರೆಗೆ ನಗದು ಸೇರಿದಂತೆ 288 ಕೋಟಿ ರೂ. ಮೊತ್ತದ ವಸ್ತುಗಳನ್ನು ಜ್ತು ಮಾಡಲಾಗಿದೆ.

ಈವರೆಗೆ ಒಟ್ಟು 44,09 ಕೋಟಿ ನಗದು, 1,43 ಕೋಟಿ ಬೆಲೆಯ ಮದ್ಯ, 9.54 ಕೋಟಿ ಮೌಲ್ಯದ ಡ್ರಗ್ಸ್, 10.56 ಕೋಟಿ ಬೆಲೆಯ ಚಿನ್ನಾಭರಣ, 9 ಲಕ್ಷ ಮೌಲ್ಯದ ವಜ್ರ, 7.62 ಕೋಟಿ ಬೆಲೆಯ ಉಚಿತ ಉಡುಗೊರೆ ಹಾಗೂ 71.74 ಕೋಟಿ ರೂ. ಬೆಲೆಯ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸ್/ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಅಬಕಾರಿ, ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಇಲಾಖೆಗಳು ಕಾರ್ಯಾಚರಣೆ ನಡೆಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net