70ನೇ ವಯಸ್ಸಿಗೆ ತಂದೆಯಾಗುತ್ತಿದ್ದಾರೆ ಪುಟಿನ್​: ಪ್ರೇಯಸಿ ಗರ್ಭಿಣಿಯಾಗಿರುವ ಸುದ್ದಿ ಕೇಳಿ ಕೋಪಗೊಂಡ ರಷ್ಯಾ ಅಧ್ಯಕ್ಷ! ಕಾರಣ ಇಲ್ಲಿದೆ

Putin
Published on

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಅವರ​ ರಾಜಕೀಯ ಹಅಗೂ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿ ಇರುತ್ತೆ. ಅವರ ವೈಯಕ್ತಿಕ ಜೀವನದ ಕೆಲವು ರಹಸ್ಯಗಳಯ ಆಗ್ಗಾಗ್ಗೆ ಪ್ರಪಂಚಕ್ಕೆ ಜಗಜ್ಜಾಹೀರಾಗುತ್ತಿರುತ್ತವೆ.ಕುತೂಹಲದಿಂದ ಕೂಡಿರುವ ಅವರ ವೈಯಕ್ತಿಕ ಜೀವನದ ಮತ್ತೊಂದು ಅಚ್ಚರಿ ಸುದ್ದಿ ಹೊರಬಿದ್ದಿದೆ. ಇತ್ತ ಯೂಕ್ರೇನ್​ ಜತೆಗಿನ ಯುದ್ಧದ ನಡುವೆಯೂ ಪುಟಿನ್​ ಮತ್ತೆ ತಂದೆಯಾಗುತ್ತಿದ್ದಾರಂತೆ.

ಇತ್ತೀಚೆಗೆ ಕಣ್ಮರೆಯಾಗಿದ್ದ ಪ್ರೇಯಸಿ ಜಿಮ್ನಾಸ್ಟಿಕ್​​ ಅಲಿನಾ ಕಬೀವಾ ಇದೀಗ ಗರ್ಭಿಣಿಯಾಗಿರುವ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ. 69 ವರ್ಷದ ಪುಟಿನ್​ ಈ ವರ್ಷ ಅಕ್ಟೋಬರ್​ನಲ್ಲಿ 70ನೇ ಜನ್ಮದಿನವನ್ನು ಆಚರಿಸಲಿದ್ದಾರೆ. ಈ ನಡುವೆ ಅವರ ಪ್ರೇಯಸಿ ಮೂರನೇ ಮಗುವಿನ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಈ ಸುದ್ದಿ ಈಗ ಸ್ವತಃ ತಂದೆಯಾಗುತ್ತಿರುವ ಪುಟಿನ್​ಗೆ ಕೋಪ ತರಿಸಿದೆಯಂತೆ ಇದಕ್ಕೆ ಕಾರಣವೂ ಇದೆ. ಆದರೆ ಇತ್ತ ಯೂಕ್ರೇನ್​ ನಡುವಿನ ಯುದ್ಧ ಮುಂದುವರಿದಿದ್ದು, ಸದ್ಯ ಯುದ್ಧ ತಂತ್ರಗಾರಿಕೆಯಲ್ಲೇ ಹೆಚ್ಚು ಬಿಜಿಯಾಗಿರುವಾಗಲೇ ಪ್ರೇಯಸಿ ನೀಡಿರುವ ಸುದ್ದಿ ಕೋಪಕ್ಕೆ ಕಾರಣವಾಗಿದೆ. ಈ ಸಮಯದಲ್ಲಿ ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಪುಟಿನ್  ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಮ್ನಾಸ್ಟಿಕ್​ ಜತೆಗಿನ ಪುಟಿನ್​ ಪ್ರೀತಿ ಎಂದೋ ಜಗಜ್ಜಾಹೀರಾಗಿದೆ. ಇಬ್ಬರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಪುಟಿನ್​ ಮಾತ್ರ ಈವರೆಗೂ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಲ್ಲ. ಆದರೂ ಇಬ್ಬರ ಸಂಬಂಧದ ಬಗ್ಗೆ ಆಗ್ಗಾಗ್ಗೆ ಚರ್ಚೆಗೆ ಬರುವುದು ಸಾಮಾನ್ಯವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net