

ರಾಣೆಬೆನ್ನೂರ: ಇಂದಿನ ಯುವಜನತೆಯಲ್ಲಿ ಹಿಂದು ಧರ್ಮದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ನಮ್ಮ ದೇಶದ ಸಂಸತಿ ಆಚಾರ ವಿಚಾರಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಹಿಂದುಗಳ ಮೇಲಿದೆ ಎಂದು ವಿಶ್ವ ಹಿಂದು ಪರಿಷತ್ ಕೇಂದ್ರಿಯ ಅಧಿಕಾರಿ ಸ್ಥಾನು ಮಾಲುಯನ್ಜೀ ಹೇಳಿದರು.
ನಗರದ ಆದಿಶಕ್ತಿ ದೇವಸ್ಥಾನ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್ನ ತಾಲೂಕು ಟಕದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಂಸ್ಥಾಪನಾ ದಿನ ಹಾಗೂ ಷಷ್ಠಿಪೂತಿರ್ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸನಾತನ ಸಂಸತಿ ಸಾವಿರಾರು ವರ್ಷಗಳಿಂದ ಬಂದಿದೆ. ಇದನ್ನು ಹೋಗಲಾಡಿಸಬೇಕೆಂದು ಅನೇಕ ಶತಮಾನಗಳಿಂದ ಅನೇಕ ಸಮುದಾಯಗಳು ಪ್ರಯತ್ನ ಪಟ್ಟರೂ ಹಿಂದು ಧರ್ಮ ಅಳಿಯದೆ ಗಟ್ಟಿಯಾಗಿ ನಿಂತಿದೆ. ಸನಾತನ ಹಿಂದು ಧರ್ಮದ ಜಾಗತಿ ಮಾಡಬೇಕಾದದು ಧಾಮಿರ್ಕ ಸಂಟನೆಯಾಗಿ ಪರಿಷತ್ ಆದ್ಯ ಕರ್ತವ್ಯವಾಗಿದೆ ಎಂದರು.
60ವರ್ಷಗಳಿಂದ ವಿಶ್ವ ಹಿಂದು ಪರಿಷತ್ ದೇಶದ ದೇವಸ್ಥಾನ, ಮಠ&ಮಂದಿರಗಳು ಹಾಗೂ ಗೋ&ಶಾಲೆಗಳ ರಣೆಗೆ ಕಟ್ಟಿಬದ್ಧವಾಗಿ ಹೋರಾಟ ಮಾಡುತ್ತಾ ಬಂದಿದೆ. ಹಿಂದು ಸಮಾಜವನ್ನು ಸಂಟಿಸುವುದು ಮತ್ತು ಸೇವೆ ಮಾಡುವುದು ಪರಿಷತ್ ಮೂಲ ಉದ್ದೇಶವಾಗಿದೆ. ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು. ಹಿಂದು ಧರ್ಮವನ್ನು ಬಲಪಡಿಸಲು ಪೂರಕ ವಾತಾವರಣ ಸೃಷ್ಠಿಸಲು ವಿಶ್ವ ಹಿಂದು ಪರಿಷತ್ ಬದ್ಧವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸ್ಥಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶನಂದಜೀ ಮಹಾರಾಜ್ ಮಾತನಾಡಿ, ಭಾರತ ದೇಶ ಸದೃಢ ರಾಷ್ಟ್ರವಾಗಬೇಕು. ಹಿಂದು ಸಮಾಜದ ಉಳಿವಿಗಾಗಿ ಹಿಂದು ಸಮಾಜದ ಜನರು ಜಾಗೃತಿ ಹೊಂದಬೇಕು. ವಿಶ್ವ ಹಿಂದು ಪರಿಷತ್ ಜತೆ ಹಿಂದುಗಳು ನಿಂತು ಅದನ್ನು ಬೆಳೆಸಿಕೊಂಡು ಹೋಗಬೇಕು. ಆಗ ದೇಶದ ಸಂಸತಿ ಪರಂಪರೆ ಉಳಿಯುತ್ತದೆ ಎಂದರು.
ಭಗವದ್ಗೀತೆ ಪಾಠವನ್ನು ವಿದ್ಯಾಥಿರ್ಗಳಿಗೆ ಉಚಿತವಾಗಿ ಹೇಳುವ ಕೊಡುವ ಶಿಕ್ಷಕಿ ಶ್ವೇತಾ ಐರಣಿ ಅವರನ್ನು ಸನ್ಮಾನಿಸಲಾಯಿತು.
ನವಶಕ್ತಿ ಮಹಿಳಾ ಮಂಡಳದ ಅಧ್ಯೆ ಸಾವಿತ್ರಮ್ಮ ಎಲಿಗಾರ, ಚೋಳಪ್ಪ ಕಸವಾಳ, ಪ್ರಕಾಶ ಬುರಡಿಕಟ್ಟಿ, ರಮೇಶ ಕದಮ್, ಅನಿಲ್ ಹಲವಾಗಲ, ರುದ್ರೇಶ ಬುಕ್ಕಶೆಟ್ಟಿ, ರಾಮನಗೌಡ ಪಾಟೀಲ, ನಾಗರಾಜ ಕೊರವರ, ವಿನಯಗೌಡ ಬಾಳನಗೌಡ್ರ, ಅನಿಲ್ ಮಳವಳ್ಳಿ, ಜಯರಾಮ ಕುಂದಾಪುರ, ಬೀರೇಶ ಗುದಿಗೇರ, ಸಂಜೀವ ಬೇನಾಳ ಮತ್ತಿತರರು ಉಪಸ್ಥಿತರಿದ್ದರು.