ವಿಷನ್ ನೀಟ್ ಅಕಾಡೆಮಿಯ ವಿದ್ಯಾರ್ಥಿಗಳ ಫಲಿತಾಂಶ
ಬೆಂಗಳೂರು:
ವಿಷನ್ ನೀಟ್ ಅಕಾಡೆಮಿಯ ವಿದ್ಯಾರ್ಥಿಗಳಾದ ಚೇತನ ಎಸ್.ವೈ.-590 ಅಂಕ, ಸುದರ್ಶನ್-685, ಸೃಜನ್-677, ವಿವೇಕಗೌಡ-675 ಸಂತೋಷ್ ಎನ್.ಕೆ.-675, ಅಕ್ಷಯ ಕಲ್ಮಠ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
2011 ರಲ್ಲಿ ಕೇವಲ ಒಬ್ಬ ವಿದ್ಯಾರ್ಥಿಯಿಂದ ಪ್ರಾರಂಭಿಸಿದ ವಿಷನ್ ಮೆಡಿಕಲ್ ಕೋಚಿಂಗ್ ಸಂಸ್ಥೆ ಕರ್ನಾಟಕದಲ್ಲಿ ವೈದ್ಯಕೀಯ ಕೋಚಿಂಗ್ ಸಂಸ್ಥೆ ಪ್ರಾರಂಭಿಸಿದ ಮೊಟ್ಟಮೊದಲ ಕೋಚಿಂಗ್ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆ ಒಬ್ಬ ವಿದ್ಯಾರ್ಥಿಯ ವೈದ್ಯನಾಗುವ ಕನಸನ್ನು ನನಸು ಮಾಡಿದ್ದಲ್ಲದೆ ಸತತ 13 ವರ್ಷಗಳಿಂದ ಅದೇ ಯಶಸ್ಸನ್ನು ಮುಂದುವರೆಸಿಕೊಂಡು ಬಂದಿದ್ದು, ಪ್ರತಿ ವರ್ಷವೂ 350 ರಿಂದ 400 ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ನೀಟ್ ಕೋಚಿಂಗ್ ಪಡೆದು ಉತ್ತಮ ರ‌್ಯಾಂಕ್‌ನೊಂದಿಗೆ ಸರ್ಕಾರಿ (ಉಚಿತ) ಮೆಡಿಕಲ್ ಸೀಟ್ ಪಡೆದು ವೈದ್ಯಕೀಯ ಶಿಕ್ಷಣ ಮಾಡುತ್ತಿದ್ದಾರೆ, ಇದುವರೆಗೂ 4350 ಕ್ಕೂ ಅಧಿಕ ವಿದ್ಯಾರ್ಥಿಗಳು ವಿಷನ್ ನೀಟ್ ಅಕಾಡೆಮಿಯಲ್ಲಿ ಕೋಚಿಂಗ್ ಪಡೆದು ವೈದ್ಯರಾಗಿದ್ದಾರೆ ಮತ್ತು ಎಂ.ಬಿ.ಬಿ.ಎಸ್ ಮಾಡುತ್ತಿದ್ದಾರೆ. ಅದರಂತೆ ಈ ಬಾರಿಯೂ 300 ಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ (ಉಚಿತ) ಮೆಡಿಕಲ್ ಸೀಟ್ ಪಡೆಯಲಿದ್ದಾರೆ ಎಂಬ ವಿಶ್ವಾಸವಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಇಲ್ಲಿಗೆ ಅನೇಕ ವಿದ್ಯಾರ್ಥಗಳು ನೀಟ್ ಕೋಚಿಂಗ್ ಪಡೆಯಲೆಂದೇ ಬರುತ್ತಾರೆ.