ಧಾರ್ಮಿಕ ಆಚರಣೆಗಳಿಂದ ಸದ್ವಿಚಾರ ವೃದ್ಧಿ

21-ಎಸ್ಕೆಪಿ-1-ಶ್ರೀ-ಗಳಿಗೆ-ಗೌರವ-ಸಮರ್ಪಣೆ
ತೊಗರ್ಸಿಯಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಯುವಕ ಸಂಘದಿಂದ ಏರ್ಪಡಿಸಿದ್ದ ಶ್ರೀ ಗಣೇಶೋತ್ಸವದಲ್ಲಿ ಮಳೆ ಹಿರೇಮಠದ ಶ್ರೀ ಮಹಂತ ದೇಶೀಕೇಂದ್ರ ಸ್ವಾಮೀಜಿ ಅವರಿಗೆ ಗೌರವ ಸಮರ್ಪಿಸಲಾಯಿತು. ಯುವಕ ಸಂಘದ ಪದಾಧಿಕಾರಿಗಳು ಇದ್ದರು.
Published on

ಶಿಕಾರಿಪುರ: ಧಾರ್ಮಿಕ ಆಚರಣೆಗಳಿಂದ ನಮ್ಮಲ್ಲಿ ಸದ್ವಿಚಾರಗಳು ಹೆಚ್ಚುತ್ತವೆ ಎಂದು ಮಳೆ ಹಿರೇಮಠದ ಶ್ರೀ ಮಹಂತ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ತೊಗರ್ಸಿಯಲ್ಲಿ ಶ್ರೀ ಮಲ್ಲಿಕಾರ್ಜುನಸ್ವಾಮಿ ಯುವಕ ಸಂಘದ ಗಣಪತಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಯುವಜನತೆ ಪೂಜೆ, ಧಾರ್ಮಿಕ ಆಚರಣೆಗಳನ್ನು ಅನುಸರಿಸಬೇಕು. ಹಿರಿಯರು ತೋರಿಸುವ ಸನ್ಮಾರ್ಗದಲ್ಲಿ ಜೀವನ ಮುನ್ನಡೆಸಬೇಕು ಎಂದು ತಿಳಿಸಿದರು.

ಇಂತಹ ಉತ್ಸವ, ಹಬ್ಬಗಳು ಧರ್ಮೋತ್ಥಾನ ಕಾರ್ಯಕ್ಕೆ ಪೂರಕವಾಗಿವೆ. ಆಧುನಿಕ ಜೀವನಶೈಲಿ ಹಾಗೂ ಮಾನಸಿಕ ಒತ್ತಡಗಳ ಕಾರಣಕ್ಕೆ ಧರ್ಮ ಮಾರ್ಗದಿಂದ ದೂರ ಸರಿಯುತ್ತಿರುವುದನ್ನು ಕಾಣುತ್ತಿದ್ದೇವೆ. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮ ನಮಗೆ ನೆರಳಾಗಿ ನಿಂತು ನಮ್ಮನ್ನು ರಕ್ಷಣೆ ಮಾಡುತ್ತದೆ. ಮಣ್ಣಿನ ಆಚಾರ-ವಿಚಾರ ಮತ್ತು ಸಂಪ್ರದಾಯಗಳನ್ನು ಪಾಲಿಸಬೇಕು. ಮಾನವೀಯತೆ ಸಾರುವ ವಿಶ್ವಮಾನವ ಧರ್ಮ ನಮ್ಮದು ಎಂದು ತಿಳಿಸಿದರು.

ಸಂಘದಿಂದ ಶ್ರೀಗಳಿಗೆ ಗೌರವ ಸಮರ್ಪಿಸಲಾಯಿತು. ಶಾಸ್ತ್ರೋಕ್ತವಾಗಿ ಪೂಜಾ ವಿಧಾನಗಳು ನಡೆದವು. ಅನ್ನದಾನ ಹಮ್ಮಿಕೊಳ್ಳಲಾಗಿತ್ತು. ಶ್ರೀ ಮಲ್ಲಿಕಾರ್ಜುನ ಸ್ವಾಮಿ ಯುವಕ ಸಂಘದ ಪದಾದಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು. ಅದ್ದೂರಿ ಮೆರವಣಿಗೆಯೊಂದಿಗೆ ಶ್ರೀ ಮಹಾಗಣಪತಿ ವಿಸರ್ಜನೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net