

ಮುಂಬೈ: ಕರೊನಾ ಲಾಕ್ಡೌನ್ ಸಮಯವನ್ನು ಕುಟುಂಬಸ್ಥರೊಂದಿಗೆ ಕಳೆಯುತ್ತಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಫಿಟ್ನೆಸ್ ಕಾಪಾಡಿಕೊಳ್ಳಲು ಮನೆಯಲ್ಲೇ ಕಸರತ್ತು ನಡೆಸುತ್ತಿದ್ದಾರೆ. ಆ ಬಗ್ಗೆ ಸ್ವತಃ ಅವರೇ ವಿಡಿಯೋ ಶೇರ್ ಮಾಡಿದ್ದು, ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿರಿ ಮತ್ತೊಮ್ಮೆ ರಾಷ್ಟ್ರ ರಾಜಕೀಯಕ್ಕೆ ದೇವೇಗೌಡ ಎಂಟ್ರಿ!
ಟ್ವಿಟರ್ನಲ್ಲಿ ಮಂಗಳವಾರ 'My first shot at 180 landings. Top exercise' ಎಂದು ಬರೆದು ಅಪ್ಲೋಡ್ ಮಾಡಿರುವ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಅಭಿಮಾನಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. '180 ಲ್ಯಾಂಡಿಂಗ್ಗಳಲ್ಲಿ ಮೊದಲ ಶಾಟ್... ಉತ್ತಮ ವ್ಯಾಯಾಮ' ಎಂಬ ಟೆಕ್ಸ್ಟ್ ಮುಂದೆ ಸೂಪರ್ ಇಮೋಜಿ ಹಾಕಿದ್ದಾರೆ.
ಕಾಲುಗಳನ್ನು 180 ಡಿಗ್ರಿಯಷ್ಟು ಮೇಲಕ್ಕೆತ್ತಿ ಹಿಮ್ಮುಖದಿಂದ ಮುಂದಕ್ಕೆ ತಿರುಗುವ ಕೊಹ್ಲಿ ಕಸರತ್ತನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. 'ವಿರಾಟ್ ಭಾಯ್ಗೆ ಸ್ಫೂರ್ತಿ ನೀಡಿ.. ನೀವು ದಂತಕಥೆ'. "ಓ ಮೈ ಕಿಂಗ್.. ನೀವು ಏನೇ ಮಾಡಿದರೂ ಅದೆಲ್ಲವೂ ಐಕಾನಿಕ್'... ಹೀಗೆ ಸಾವಿರಾರು ಕಮೆಂಟ್ಗಳು ಬರುತ್ತಿವೆ.
ವಿಡಿಯೋ ನೋಡಿ