ವೀರಶೈವಾಗಮ

Untitled design
Published on
ತ್ರಿಕಾಲಮಲ್ಲಿಕಾ ಚೈವ ಕನಕಾಂಬರಮೇವ ಚ |

ದ್ರೋಣಂ ಚ ಬಿಲ್ವಪತ್ರಂ ಚ ಪ್ರಶಸ್ತಾನಿ ಹಿ ಸರ್ವದಾ ||

ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೀಗೆ ಮೂರೂ ಕಾಲಗಳಲ್ಲಿ ದೊರೆಯುವ ತ್ರಿಕಾಲ ಮಲ್ಲಿಗೆ ಹೂವು, ಕನಕಾಂಬರ, ದ್ರೋಣ (ತುಂಬೆ ಹೂ) ಮತ್ತು ಬಿಲ್ವಪತ್ರೆ - ಇವು ಎಲ್ಲ ಕಾಲದ ಪೂಜೆಗಳಿಗೆ ಶ್ರೇಷ್ಠ ಎಂದು ಹೇಳಲಾಗಿದೆ. ಇವುಗಳಲ್ಲಿ ಬಿಲ್ವ ಪತ್ರಿಗಳು ವಿಶಿಷ್ಟವಾಗಿರುತ್ತವೆ. ಇವುಗಳ ಮಹತ್ವವನ್ನು ಶಾಸ್ತ್ರದಲ್ಲಿ ವಿಶೇಷವಾಗಿ ಹೇಳಲಾಗಿದೆ. ಒಂದು ವೇಳೆ ಯಾವುದೇ ಸಮಯದ ಪೂಜೆಯಾಗಿರಲಿ ಅದಕ್ಕೆ ಅನುಕೂಲವಾದ ಹೂವುಗಳು ದೊರೆಯದಿದ್ದರೆ, ಆಗ ಕೇವಲ ಬಿಲ್ವಪತ್ರಿಗಳನ್ನು ಧರಿಸಿಯೂ ಪೂಜೆ ಮಾಡಬಹುದಾಗಿದೆ. ಈ ಬಿಲ್ಲಪತ್ರಿಯು ಮೂರು ದಳಗಳನ್ನು ಹೊಂದಿದ್ದು, ಅವು ಸತ್ತ್ವ ರಜ ತಮ ಎಂಬ ಮೂರು ಗುಣಗಳ ರೂಪವೂ, ಆಣವ, ಮಾಯೀಯ, ಕಾರ್ವಿುಕ ಎಂಬ ಮೂರು ಮಲಗಳನ್ನು ಕಳೆಯುವ ಶಿವನ ಕೈಯಲ್ಲಿರುವ ತ್ರಿಶೂಲದ ಸಂಕೇತವೂ, ಶಿವನ ಮೂರು ಕಣ್ಣುಗಳ ರೂಪವೂ ಮತ್ತು ಮೂರು ಜನ್ಮಗಳಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳನ್ನು ನಿವಾರಿಸಲು ಸಮರ್ಥವೂ ಆಗಿವೆ ಎಂದು ಹೇಳಲಾಗಿದೆ.

| ಮುಕುಟಾಗಮ (4. 19)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net