ವೀರಶೈವಾಗಮ

shivalinga
Published on
 ಪರಿತ್ಯಜ್ಯ ಸದಾಚಾರಂ ಮಾ ಪ್ರವರ್ತಸ್ವ ಸರ್ವದಾ |

ಇತ್ಯಾಜ್ಞಾದೀಕ್ಷಯಾಠಠದಿಶ್ಯ ತತಸ್ತೆ್ವೕವಂ ವದೇದ್ ಗುರುಃ ||

ದೀಕ್ಷೆಯನ್ನು ಪಡೆದುಕೊಳ್ಳುವ ಶಿಷ್ಯನಿಗೆ ನೀನು ಸದಾಚಾರವನ್ನು ಬಿಟ್ಟು ಎಂದಿಗೂ ವರ್ತಿಸಬೇಡ ಎಂದು ಆಜ್ಞೆ ಮಾಡುವುದೆ ಆಜ್ಞಾದೀಕ್ಷೆ. ಸದಾಚಾರಿಯಾದ ವ್ಯಕ್ತಿಯು ಸಮಾಜದಲ್ಲಿ ಎಲ್ಲರ ಗೌರವಕ್ಕೆ ಪಾತ್ರನಾಗುವುದರ ಜೊತೆಗೆ ಪರಮಾತ್ಮನಿಗೂ ಸದಾಚಾರವು ಪ್ರಿಯವಾಗಿರುವುದರಿಂದ ಅವನ ಅನುಗ್ರಹವನ್ನೂ ಪಡೆದುಕೊಳ್ಳುತ್ತಾನೆ. ಹಾಲಿನ ಪಾತ್ರೆಯನ್ನು ಹೊರಗೆ ಕಾಯಿಸಿದರೂ ಒಳಗಿನ ಹಾಲು ಕೂಡ ಬಿಸಿಯಾಗುವಂತೆ ಸದಾಚರಣೆಗಳನ್ನು ಬಹಿರಂಗದಲ್ಲಿ ಆಚರಿಸುತ್ತಿದ್ದರೂ ಸಾಧಕನ ಬಹಿರಂಗದ ಶುದ್ಧಿಯ ಜೊತೆಗೆ ಅಂತರಂಗದ ಶುದ್ಧಿಯೂ ಆಗುತ್ತದೆ.

| ಕಾರಣಾಗಮ (ಕ್ರಿ. ಪಾ. 1.44) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net