ವೀರಶೈವಾಗಮ

ವಿಜಯವಾಣಿ (3)
Published on
ದೀಕ್ಷಯಿಷ್ಯ ಇಮಂ ಶಿಷ್ಯಂ ಶಕ್ತಿಪಾತವಿಧಾನತಃ |

ಇತಿ ಸಂಕಲ್ಪ್ಯ ದದ್ಯಾಚ್ಚ ಸಪ್ತ ದೀಕ್ಷಾಃ ಕ್ರಿಯಾಂತರಾಃ ||

ಶಕ್ತಿಪಾತ ವಿಧಾನದಿಂದ ಈ ಶಿಷ್ಯನಿಗೆ ದೀಕ್ಷೆಯನ್ನು ಅನುಗ್ರಹಿಸುವೆ ಎಂದು ಸಂಕಲ್ಪ ಮಾಡಿ ಗುರುವಾದವನು ತನ್ನ ಬಳಿ ಬಂದ ಶಿಷ್ಯನಿಗೆ ಕ್ರಿಯಾದಿಕ್ಷಾಂತರ್ಗತವಾದ ಏಳು ದೀಕ್ಷೆಗಳನ್ನು ನೀಡಬೇಕು. ದೀಕ್ಷೆಯ ಸಂದರ್ಭದಲ್ಲಿ ಶಕ್ತಿಪಾತ ಬಹಳ ಮುಖ್ಯವಾದುದು. ಶಕ್ತಿಪಾತವೆಂದರೆ ಶಿವಾನುಗ್ರಹ ಮತ್ತು ಸದ್ಗುಣಗಳು ಎಂದರ್ಥ. ಸಮೀಪ ಬಂದಿರುವ ಶಿಷ್ಯನಲ್ಲಿ ಜಾತಿ, ಪಂಗಡ, ಉಪಪಂಗಡ, ವರ್ಣ, ಆಶ್ರಮ, ಲಿಂಗ, ಆಸ್ತಿ, ಅಂತಸ್ತುಗಳನ್ನು ನೋಡಿ ದೀಕ್ಷೆಯನ್ನು ಕೊಡಲಾಗದು. ಶಕ್ತಿಪಾತ ಉಂಟಾಗಿದೆಯೋ ಇಲ್ಲವೋ ಎಂಬುದನ್ನು ಮಾತ್ರ ಗಮನಿಸಿ ದೀಕ್ಷೆಯನ್ನು ನೀಡಬೇಕು. ಇದು ಶಿವಾಗಮಗಳ ಸಿದ್ಧಾಂತ. ಶಿವಾಗಮಗಳ ಈ ವಿಚಾರವು ವೇದಗಳಿಗಿಂತ ವಿಶಿಷ್ಟವಾದುದು.

| ಕಾರಣಾಗಮ (ಕ್ರಿ. ಪಾ. 1.42) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net