

ಮೃತ್ಯುಪಾಶಾವಶಂ ದೀನಂ
ಕೃಪಯಾನುಗೃಹಾಣ ಮಾಂ ||
ದೀಕ್ಷೆಯನ್ನು ಹೊಂದಬಯಸುವ ಶಿಷ್ಯನು ಗುರುವಿನ ಬಳಿಗೆ ಬಂದು ‘ಸಂಸಾರ ಸಾಗರದಲ್ಲಿ ಮುಳುಗಿದ, ಜನನ ಮರಣ ರೂಪವಾದ ಭವಬಂಧನವೆಂಬ ಮೊಸಳೆಯ ಭಯದಿಂದ ವ್ಯಾಕುಲಗೊಂಡ, ಮೃತ್ಯುಪಾಶದಲ್ಲಿ ಬಂಧಿತನಾದ ಮತ್ತು ನನ್ನ ಸ್ವ್ವರೂಪದ ನೈಜವಾದ ಜ್ಞಾನವಿಲ್ಲದ ಕಾರಣ ದೀನನಾದ ನನ್ನನ್ನು ಕೃಪೆ ಮಾಡಿ ದಯವಿಟ್ಟು ಅನುಗ್ರಹಿಸಬೇಕು’ ಎಂಬುದಾಗಿ ನಿವೇದಿಸಿಕೊಳ್ಳಬೇಕು. ಗುರು ಮತ್ತು ದೇವರನ್ನು ಪ್ರಸನ್ನಗೊಳಿಸಿಕೊಳ್ಳುವುದು ಎಷ್ಟು ಮುಖ್ಯವೋ ಅವರು ಪ್ರಸನ್ನರಾದಾಗ ಅವರ ಬಳಿ ಮಾಡಿಕೊಳ್ಳುವ ಪ್ರಾರ್ಥನೆಯೂ ಅಷ್ಟೇ ಮುಖ್ಯವಾದುದು.
| ಕಾರಣಾಗಮ (ಕ್ರಿ. ಪಾ. 1. 37) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.