

ಪ್ರಮುಖವಾಗಿ ದೀಕ್ಷೆಗಳಲ್ಲಿ ವೇಧಾದೀಕ್ಷೆ, ಮಂತ್ರದೀಕ್ಷೆ ಮತ್ತು ಕ್ರಿಯಾದೀಕ್ಷೆ ಎಂಬುದಾಗಿ ಮೂರು ಪ್ರಕಾರ. ಇವುಗಳಲ್ಲಿ ಶ್ರೀ ಗುರುವು ಶಿಷ್ಯನ ಮಸ್ತಕದ ಮೇಲೆ ತನ್ನ ಹಸ್ತವನ್ನಿರಿಸಿ ದಿವ್ಯವಾದ ತನ್ನ ದೃಷ್ಟಿಯಿಂದ ನೋಡುವ ಮೂಲಕ ಶಿವಜ್ಞಾನವನ್ನು ವೇಧಿಸುವ (ಜಾಗೃತಗೊಳಿಸುವ) ಸಂಸ್ಕಾರವೇ ವೇಧಾದೀಕ್ಷೆ. ಶಿಷ್ಯನ ಬಲಗಿವಿಯಲ್ಲಿ ಪ್ರಣವ ಸಹಿತ ಪಂಚಾಕ್ಷರೀ ಮಂತ್ರವನ್ನು ಉಪದೇಶಿಸುವ ಸಂಸ್ಕಾರವೇ ಮಂತ್ರದೀಕ್ಷೆ. ವಿಭಿನ್ನ ಸಂಸ್ಕಾರಗಳ ಮೂಲಕ ಪರಿಶೋಧನೆಗೊಂಡ ಇಷ್ಟಲಿಂಗವನ್ನು ಹಲವು ಸಂಸ್ಕಾರಗಳಿಂದ ಶುದ್ಧಗೊಂಡ ಶಿಷ್ಯನ ವಾಮಹಸ್ತದಲ್ಲಿ ದಯಪಾಲಿಸುವ ಸಂಸ್ಕಾರವೇ ಕ್ರಿಯಾದೀಕ್ಷೆ.
| ಕಾರಣಾಗಮ (ಕ್ರಿ. ಪಾ. 1. 14) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.