ವೀರಶೈವಾಗಮ

ವಿಜಯವಾಣಿ
Published on
ದೀಯತೇ ಲಿಂಗಸಂಬಂಧಃ ಕ್ಷೀಯತೇ ಚ ಮಲತ್ರಯಂ | ದೀಯತೇ ಕ್ಷೀಯತೇ ಯಸ್ಮಾತ್ ಸಾ ದೀಕ್ಷೇತಿ ನಿಗದ್ಯತೇ ||

ಇಲ್ಲಿ ವೀರಶೈವ ಧರ್ಮದ ಪವಿತ್ರ ಸಂಸ್ಕಾರವಾದ ದೀಕ್ಷೆ ಶಬ್ದದ ಅಕ್ಷರಾರ್ಥವನ್ನು ಹೇಳಲಾಗಿದೆ. ’ದೀ’ ಎಂದರೆ ಲಿಂಗಸಂಬಂಧವನ್ನು ಉಂಟು ಮಾಡುವ, ಮತ್ತು ’ಕ್ಷಾ’ ಎಂದರೆ ಮಲತ್ರಯಗಳನ್ನು ನಾಶ ಮಾಡುವ ಎಂದರ್ಥ. ಹೀಗೆ ಯಾವ ಸಂಸ್ಕಾರದ ಮೂಲಕ ಆಣವ ಮಾಯೀಯ ಮತ್ತು ಕಾರ್ವಿುಕ ಮಲಗಳನ್ನು ನಾಶ ಮಾಡಿ ಭಾವಲಿಂಗ, ಪ್ರಾಣಲಿಂಗ ಮತ್ತು ಇಷ್ಟಲಿಂಗಗಳನ್ನು ಶರೀರದಲ್ಲಿ ಸಂಬಂಧಗೊಳಿಸಲಾಗುತ್ತದೆಯೋ ಆ ಸಂಸ್ಕಾರವನ್ನು ದೀಕ್ಷೆ ಎಂದು ಕರೆಯಲಾಗುತ್ತದೆ. ಈ ಧರ್ಮದ ಪ್ರಕಾರ ದೀಕ್ಷೆಯೇ ಮೋಕ್ಷದ ಹೆಬ್ಬಾಗಿಲು. ಯಾರು ದೀಕ್ಷೆಯನ್ನು ಸ್ವೀಕರಿಸುವುದಿಲ್ಲವೋ ಅವರಿಗೆ ಮೋಕ್ಷವಿಲ್ಲ. ಕಾರಣ ಪ್ರತಿಯೊಬ್ಬರೂ ತಪ್ಪದೇ ಯೋಗ್ಯ ಗುರುವಿನಿಂದ ದೀಕ್ಷೆ ಪಡೆದುಕೊಳ್ಳಬೇಕು.

| ಕಾರಣಾಗಮ (ಕ್ರಿ. ಪಾ. 1. 12) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net