

ದೀಕ್ಷಾತ್ರಯೇಣ ಸಂದಹ್ಯ ಲಿಂಗತ್ರಯಮುಪಾದಿಶೇತ್ ||
ಸದ್ಗುರವು ತನಗೆ ಶರಣಾಗತನಾಗಿ ಬಂದ ಶಿಷ್ಯನ ಸ್ಥೂಲ,
ಸೂಕ್ಷ್ಮ ಮತ್ತು ಕಾರಣವೆಂಬ ಮೂರು ಶರೀರಗಳಲ್ಲಿ ಇರುವ ಅನಾದಿಯಾದ ಆಣವ, ಮಾಯೀಯ ಮತ್ತು ಕಾರ್ವಿುಕವೆಂಬ ಮೂರು ವಿಧವಾದ ಮಲಗಳನ್ನು ವೇಧಾದೀಕ್ಷೆ, ಮಂತ್ರದೀಕ್ಷೆ ಮತ್ತು ಕ್ರಿಯಾದೀಕ್ಷೆ ಎಂಬ ಮೂರು ಪ್ರಕಾರದ ದೀಕ್ಷೆಗಳ ಮೂಲಕ ಭಸ್ಮ ಮಾಡಿ ಭಾವಲಿಂಗ, ಪ್ರಾಣಲಿಂಗ ಮತ್ತು ಇಷ್ಟಲಿಂಗ ಎಂಬ ಮೂರು ಪ್ರಕಾರದ ಲಿಂಗಗಳನ್ನು ಅನುಗ್ರಹಿಸಬೇಕು. ಇದರಿಂದ ಜೀವಾತ್ಮನಲ್ಲಿರುವ ಸಂಕುಚಿತಗೊಂಡ ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಗಳು ವಿಕಾಸಗೊಂಡು ಆತ್ಮ ಸಾಕ್ಷಾತ್ಕಾರದ ಮಾರ್ಗವು ಪ್ರಶಸ್ತವಾಗುತ್ತದೆ.
| ಕಾರಣಾಗಮ (ಕ್ರಿ. ಪಾ. 1. 10) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು