Viral : ಯಾವ ಝೀಬ್ರಾ ಮುಂಭಾಗದಲ್ಲಿದೆ ಹೇಳಬಲ್ಲಿರಾ?

Zeebra cross
Published on

ಟ್ವಿಟರ್​ನಲ್ಲಿ ಪ್ರಶ್ನೋತ್ತರಗಳು, ಪಝಲ್​ಗಳು ಸರ್ವೇ ಸಾಮಾನ್ಯ. ಕೆಲವೊಮ್ಮೆ ಇಂತಹ ಕಂಟೆಂಟ್​ಗಳು ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತವೆ. ಅಂಥವುಗಳ ಪೈಕಿ ಇದೊಂದು. ಈ ಫೋಟೊದಲ್ಲಿ ಕಾಣುತ್ತಿರುವ ಯಾವ ಝೀಬ್ರಾ ಮುಂಭಾಗದಲ್ಲಿದೆ? ಈ ಪ್ರಶ್ನೆ ಈಗ ವೈರಲ್ ಆಗಿದ್ದು ಉತ್ತರಗಳ ಸುರಿಮಳೆಯಾಗುತ್ತಿದೆ. ಎಲ್ಲ ಉತ್ತರಗಳು ಸರಿ ಎಂದೇನೂ ಅಲ್ಲ, ಅವರಿವರಿಗೆ ತೋಚಿದಂತೆ ಫನ್ನಿಯಾದ ಪ್ರತಿಕ್ರಿಯೆಗಳೂ ಗಮನಸೆಳೆಯುತ್ತಿವೆ.

ಟ್ವಿಟರ್​ನಲ್ಲಿ ಇಂಥದ್ದೊಂದು ಸವಾಲು ಮುಂದಿಟ್ಟವರು ಪರ್ವೀನ್​ ಕಸ್ವಾನ್​ ಐಎಫ್​ಎಸ್​. ಛಾಯಾಗ್ರಾಹಕ ಸರೋಶ್ ಲೋಧಿ ಇದನ್ನು ಆಫ್ರಿಕಾದ ಮಸೈಮಾರಾದಲ್ಲಿ ಕ್ಲಿಕ್ಕಿಸಿದ್ದಾರೆ ಎಂಬ ಟಿಪ್ಪಣಿಯೂ ಜತೆಗಿದೆ. ಈ ಟ್ವೀಟ್​ ಸಾಕಷ್ಟು ಗಮನಸೆಳೆದಿದ್ದು ನಾಲ್ಕು ಸಾವಿರದಷ್ಟು ಲೈಕ್ಸ್​ ಗಿಟ್ಟಿಸಿಕೊಂಡಿದೆ. 350ಕ್ಕೂ ಹೆಚ್ಚು ಸಲ ರೀಟ್ವೀಟ್ ಆಗಿದೆ.

ಪ್ರತಿಕ್ರಿಯೆಗಳ ಸಾಲುಗಳನ್ನು ಗಮನಿಸಿದರೆ, ಝೀಬ್ರಾ ಪಟ್ಟಿಯ ಕಾರಣ ಉತ್ತರ ಹೇಳುವುದು ಕಷ್ಟ ಎಂಬ ಪ್ರತಿಕ್ರಿಯೆ ಬಹಳಷ್ಟಿದೆ. ಪ್ರತಿಕ್ರಿಯೆಯಾಗಿ ಕೆಲವರು ಬೇರೆ ಬೇರೆ ಫೋಟೊಗಳನ್ನು ಹಾಕಿದ್ರೆ, ಇನ್ನು ಕೆಲವರು ಅದೇ ಫೋಟೋ ಡೌನ್​ಲೋಡ್ ಮಾಡಿ ಸರಿ ಮಾರ್ಕ್​ ಹಾಕಿ ಮತ್ತೆ ಅಪ್ಲೋಡ್ ಮಾಡಿ ಉತ್ತರಿಸಿದ್ದಾರೆ. ಅವುಗಳ ಝಲಕ್ ಇಲ್ಲಿದೆ. ಉತ್ತರಿಸುವುದಕ್ಕೆ ನೀವೂ ಟ್ರೈ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net