

ಫ್ಯಾಷನ್ ಅಥವಾ ಮೇಕಪ್ ಯಾವುದೇ ಇರಲಿ ಎಲ್ಲಾರ ರೀತಿಯ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿವೆ. ಕೆಲವರು ವಿಚಿತ್ರವಾದ ಫ್ಯಾಷನ್ ಮಾಡಿದ್ರೆ, ಮತ್ತೆ ಕೆಲವರು ತಮ್ಮ ಮುಖದ ಮೇಲೆ ಪಿರಿಯಡ್ ಬ್ಲಡ್ನಿಂದ ಫೇಶಿಯಲ್ ಮಾಡುತ್ತಾರೆ. ಇನ್ನು ಕೆಲವರು ಮುಖಕ್ಕೆ ಫಿಲ್ಲರ್ ಮತ್ತು ಸರ್ಜರಿ ಮಾಡಿಸಿಕೊಂಡಿರುವ ವಿಡಿಯೋ ಹೀಗೆ ಒಂದಲ್ಲ.. ಎರಡಲ್ಲ ಹಲವು ವಿಡಿಯೋಗಳು ನಿಮಗೆ ಲಭ್ಯವಾಗುತ್ತವೆ. ಆದರೆ ಮೆಣಸಿನಕಾಯಿಯ ಸಹಾಯದಿಂದ ಲಿಪ್ ಫಿಲ್ಲರ್‌ಗಳನ್ನು ಮಾಡಬಹುದು ಎಂಬ ಟ್ರಿಕ್ ನಿಮಗೆ ಗೊತ್ತಿದೆಯೇ?
ನಾವು ತಮಾಷೆ ಮಾಡುತ್ತಿಲ್ಲ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಹುಡುಗಿ ತನ್ನ ತುಟಿಗಿಗೆ ಹಸಿರು ಮೆಣಸಿನಕಾಯಿಯನ್ನು ಉಜ್ಜುವುದನ್ನು ನೀವು ನೋಡಬಹುದು. ನೈಸರ್ಗಿಕವಾಗಿ ಲಿಪ್ ಫಿಲ್ಲರ್ ತುಟಿಯನ್ನು ಪಡೆಯುವ ಸಲುವಾಗಿ ಈ ಹುಡುಗಿ ಹಾಗೆ ನಡೆದುಕೊಂಡಿದ್ದಾಳೆ. ನಂಬದಿದ್ದರೆ ನೀವೆ ಈ ವಿಡಿಯೋ ನೋಡಿ.
ಹುಡುಗಿಯೊಬ್ಬಳು ಸಮಾರಂಭಕ್ಕೆ ಹೋಗಲು ತಯಾರಾಗಿದ್ದಾಳೆ. ತನ್ನ ತುಟಿಗಳನ್ನು ಹೆಚ್ಚಿಸಲು ಹಸಿರು ಮೆಣಸಿನಕಾಯಿಯನ್ನು ಎರಡು ಭಾಗಗಳಾಗಿ ಕತ್ತರಿಸಿ ತನ್ನ ತುಟಿಗಳಿಗೆ ಉಜ್ಜಲು ಪ್ರಾರಂಭಿಸುತ್ತಾಳೆ. ಮೆಣಸಿನಕಾಯಿಯನ್ನು ತುಟಿಗೆ ಉಜ್ಜಿದ ಕಾರಣ ಉರಿಯಿಂದಾಗಿ ತುಟಿಗಳು ಊದಿಕೊಳ್ಳುತ್ತವೆ.ಅದು ನೋಡಲು ಲಿಪ್ ಫಿಲ್ಲರ್ನಂತೆ ಕಾಣುತ್ತದೆ.
ಅಪಾಯಕಾರಿಯಾದ ಈ ಟ್ರಿಕ್ ಅನ್ನು ಬಳಸುವ ಮುನ್ನ ನೀವೊಮ್ಮೆ ವೈದ್ಯರನ್ನು ಸಂಪರ್ಕಿಸಿದರೆ ಉತ್ತಮ. ಈ ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.