ರೀಲ್ಸ್​ಗಾಗಿ ಚಲಿಸುವ ರೈಲಿನಲ್ಲಿ ಹುಡುಗಾಟ; Viral Video ನೋಡಿ ನೆಟ್ಟಿಗರು ಗರಂ

Untitled design (37)
Published on

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಹಂಚಿಕೊಂಡು ವೈರಲ್​ ಆಗುವುದು ಸಾಮಾನ್ಯವಾಗಿದೆ. ಎಷ್ಟರ ಮಟ್ಟಿಗೆ ಅಂದರೆ ಜೀವದ ಹಂಗು ತೊರೆದು ವಿಡಿಯೋಗಾಗಿ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಆದರೆ ಅದೇ ಸಮಯದಲ್ಲಿ ಅವರ ವಿಡಿಯೋಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂಬುದನ್ನು ಮರೆತು ಬಿಡುತ್ತಾರೆ. ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ (Viral Video) ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ಹುಡುಗಿಯೊಬ್ಬಳು ಮತ್ತೊಬ್ಬರ ಕೈಹಿಡಿದು ರೈಲಿನ ಬಾಗಿಲಿನ ಬಳಿ ಗಾಳಿಯಲ್ಲಿ ನೇತಾಡುತ್ತಾ ರೀಲ್ಸ್​ ಮಾಡಿರುವುದನ್ನು ನೋಡಬಹುದು. ವಿಡಿಯೋ ನೋಡಿದ ಜನರು ಚಲಿಸುವ ರೈಲಿನಲ್ಲಿ ಈ ರೀತಿಯ ವರ್ತನೆ ಕ್ರಮಕೈಗೊಳ್ಳುವುದನ್ನು ಬಲವಾಗಿ ವಿರೋಧಿಸುತ್ತಿರುವಂತೆ ತೋರುತ್ತದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಸುಮಾರು 14 ಸೆಕೆಂಡುಗಳ ಈ ವಿಡಿಯೋವನ್ನು ಇದುವರೆಗೂ 5 ಕೋಟಿ 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ರೀಲ್ಸ್​ಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ, ನಿಮ್ಮ ಜೀವದ ಜತೆ ಏಕೆ ಆಟವಾಡುತ್ತಿದ್ದೀರಿ, ಎಲ್ಲವೂ ಸರಿಯಾಗಿದೆ ಆದರೆ ಅಂತಹ ವಿಡಿಯೋಗಳನ್ನು ಎಂದಿಗೂ ಮಾಡಬೇಡಿ, ಯಾರಿಗೆ ಗೊತ್ತು ಒಂದು ದಿನ ಅಪಘಾತ ಸಂಭವಿಸಬಹುದು, ವಿಡಿಯೋ ಚೆನ್ನಾಗಿದೆ ಆದರೆ ಸ್ಥಳ ಚೆನ್ನಾಗಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net