ಒಂದು ಕೈಯಲ್ಲಿ ಗೇಟ್ ಹಿಡಿದು ಸ್ಕೂಟರ್​ ಚಲಾಯಿಸಿದ ಮಹಿಳೆ; ಮುಂದೆ ಆಗಿದ್ದೂ ಮಾತ್ರ ಶೋಚನೀಯ | Viral Video

Untitled design - 2025-03-08T191957.831
Published on

ವಾಹನ ಚಲಾಯಿಸುವಾಗ ಎಚ್ಚರದಿಂದ ಇರಬೇಕು. ಯಾವಾಗ ಏನಾಗುತ್ತದೆ ಎಂದು ಹೇಳುವುದು ಕಷ್ಟ. ಮನೆಗೆ ಬೇಗ ಹೋಗಬೇಕು ಎಂಬ ಕಾರಣಕ್ಕೆ ಸಾಮಾನ್ಯವಾಗಿ ನಾವು ಟ್ರಾಫಿಕ್​​ನಲ್ಲಿ ನೋಡುತ್ತಿರುತ್ತೇವೆ. ಸಿಗ್ನಲ್​ ಜಂಪ್​ ಮಾಡುವುದು, ಫುಟ್​ಪಾತ್​ ಮೇಲೆ ದ್ವಿಚಕ್ರ ವಾಹನ ಚಲಾಯಿಸುವುದು ಹೀಗೆ ಹಲವು ಉದಾರಣೆಗಳನ್ನು ನೋಡಬಹುದು. ಆದರೆ ಸಮಯ ಕೆಟ್ಟದಾದರೆ ಏನಾಗುತ್ತದೆ ಎಂದು ಹೇಳುವುದು ಕಷ್ಟ. ಅಂತಹದ್ದೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್( Viral Video)​ ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ಮಹಿಳೆಯೊಬ್ಬರು ಮನೆ ತಲುಪುವ ಆತುರದಲ್ಲಿ ಅಥವಾ ಬೇಗನೆ ಹೋಗಬೇಕು ಎಂಬ ಆಶಯದಿಂದ ಮಾಡಿದ ಕೆಲಸ ಅವರನ್ನು ಅಪಾಯಕ್ಕೆ ದೂಡುವುದನ್ನು ನೋಡಬಹುದು. ವಿಡಿಯೋದಲ್ಲಿ ದ್ವಿಚಕ್ರ ವಾಹನದಲ್ಲಿ ಪದಾರ್ಥಗಳನ್ನು ಹೊತ್ತುಕೊಂಡು ಮಹಿಳೆಯೊಬ್ಬರು ಹೋಗುತ್ತಿರುವುದನ್ನು ನೋಡಬಹುದು. ಆ ಮಹಿಳೆ ಗೇಟ್ ಅನ್ನು ದಾಟಲು ಆತುರದಿಂದ ಎತ್ತುತ್ತಾರೆ. ಗೇಟು ಹಿಡಿದು ಸ್ಕೂಟರ್​ ಅನ್ನು ಚಲಾಯಿಸುವಾಗ ಆಕೆಯ ತಲೆ ಗೇಟ್‌ಗೆ ಡಿಕ್ಕಿ ಹೊಡೆದು ಆವರು ನೆಲಕ್ಕೆ ಬೀಳುವುದನ್ನು ಕಾಣಬಹುದು.

ಈ 10 ಸೆಕೆಂಡ್​ಗಳ ವಿಡಿಯೋವನ್ನು ಇದುವರೆಗೂ 1 ಕೋಟಿ 60 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಸಿದ್ದಾರೆ. ಇದು ತುಂಬಾ ಸ್ಮಾರ್ಟ್ ಆಗುವುದರ ಅನಾನುಕೂಲ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಇಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್​​ ಆಗುತ್ತಿದ್ದರೂ ಜನರು ಅದನ್ನು ನೋಡಿ ಎಚ್ಚೆತ್ತುಕೊಳ್ಳುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net