

ರಸ್ತೆ ಸಿಗ್ನಲ್ ಆಗಿರಲಿ ಅಥವಾ ರೈಲ್ವೆ ಕ್ರಾಸಿಂಗ್ ಆಗಿರಲಿ ಚಾಲಕರು ಹೇಗಾದರೂ ಬೇಗನೆ ಹಾದುಹೋಗಲು ಬಯಸುತ್ತಾರೆ. ಎಲ್ಲರೂ ಅವರು ಹೋಗುವ ಜಾಗಕ್ಕೆ ತಲುಪಲು ಆತುರದಲ್ಲಿದ್ದಾರೆ. 'ಆತುರ ಸೈತಾನನ ಕೆಲಸ' ಎಂಬಂತಹ ಗಾದೆಗಳು 'ಆಕಸ್ಮಿಕತೆಗಿಂತ ವಿಳಂಬ ಉತ್ತಮ...' ಎಂದು ಸ್ಪಷ್ಟವಾಗಿ ಹೇಳುತ್ತವೆ. ಆದರೆ ಇದರ ಹೊರತಾಗಿಯೂ ಕೆಲವು ನಿಮಿಷಗಳನ್ನು ಉಳಿಸಲು ಜನರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Video Viral) ಆಗಿದೆ.
ಆತುರದಲ್ಲಿ ರಸ್ತೆ ಅಥವಾ ರೈಲು ಹಳಿಗಳನ್ನು ದಾಟುವಾಗ ಜನರು ಅಪಘಾತಗಳಿಗೆ ಬಲಿಯಾಗುವಂತಹ ಅನೇಕ ಪ್ರಕರಣಗಳನ್ನು ನೋಡಿರುತ್ತೇವೆ, ಆ ವಿಡಿಯೋಗಳು ವೈರಲ್ ಆಗಿವೆ. ಸದ್ಯ ಜಾಲತಾಣದಲ್ಲಿ ಇತ್ತೀಚಿಗೆ ಹರಿದಾಡುತ್ತಿರುವ ವಿಡಿಯೋ ಸಾಕಷ್ಟು ಭಿನ್ನವಾಗಿದೆ. ವೈರಲ್ ವಿಡಿಯೋದಲ್ಲಿ ರೈಲ್ವೆ ಕ್ರಾಸಿಂಗ್ ಗೇಟ್ ಕ್ಲೋಸ್ ಮಾಡಿರುವುದನ್ನು ನೋಡಬಹುದು. ಮುಚ್ಚಿದ ರೈಲ್ವೆ ಗೇಟ್ ಮುಂದೆ ಒಬ್ಬ ವ್ಯಕ್ತಿ ನಿಂತಿರುವುದನ್ನು ಕಾಣಬಹುದು. ಆದರೆ ಕಾಯುವ ಬದಲಾಗಿ ಆತ ತನ್ನ ಬೈಕಿನಿಂದ ಇಳಿದು ಮೋಟಾರ್ ಸೈಕಲ್ ಅನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ರೈಲ್ವೆ ಹಳಿಯನ್ನು ಸರಾಗವಾಗಿ ದಾಟುತ್ತಾನೆ. ಈ ಸಮಯದಲ್ಲಿ ಅಲ್ಲಿ ನಿಂತಿದ್ದ ಉಳಿದ ಜನರು ಅವನನ್ನು ಆಶ್ಚರ್ಯದಿಂದ ನೋಡುತ್ತಲೇ ಇರುವುದನ್ನು ಕಾಣಬಹುದು.
ಈ 18 ಸೆಕೆಂಡುಗಳ ವಿಡಿಯೋವನ್ನು ನೋಡಿದ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಈತ ನಿಜವಾದ ಬಾಹುಬಲಿ, ಭಾರತದಲ್ಲಿ ಐರನ್ ಮ್ಯಾನ್ ಇಲ್ಲ ಎಂದು ಯಾರು ಹೇಳುತ್ತಾರೆ?, ಮಾರ್ವೆಲ್ ಈ ಮನುಷ್ಯನನ್ನು ಹುಡುಕುತ್ತಿದೆ ಅವನೇ ಮುಂದಿನ ಸೂಪರ್ ಹೀರೋ!, ಈ ವಿಡಿಯೋ ಮಧ್ಯಪ್ರದೇಶದಿಂದ ಬಂದಿದೆ, ಇಷ್ಟೊಂದು ಆತುರ ಯಾಕೆ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)