

ಮಹಿಳೆಯರು ಹಲವು ರೀಲ್ಸ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ವಿಶೇಷವಾಗಿರುವ ವಿಡಿಯೋಗಳಂತೂ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಳ್ಳುತ್ತವೆ. ಇತ್ತೀಚೆಗೆ ಮಹಿಳಾ ಬಾಡಿಬಿಲ್ಡರ್ ಒಬ್ಬರು ಆಭರಣಗಳೊಂದಿಗೆ ವಧುವಿನಂತೆ ಅಲಂಕರಿಸಿಕೊಂಡು ಬೈಸೆಪ್ಸ್ ತೋರಿಸುತ್ತಾ ಫೋಸ್ ಕೊಟ್ಟಿದ್ದು ಸಿಕ್ಕಾಪಟ್ಟೆ ವೈರಲ್(Viral Video) ಆಗಿತ್ತು.
ಅಂತಹದ್ದೇ ಮತ್ತೊಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇಲ್ಲಿ ಬಾಡಿಬಿಲ್ಡರ್ ದೇಹದ ಮೈಕಟ್ಟನ್ನು ವಿಶೇಷವಾಗಿ ತೋರಿಸುತ್ತಿಲ್ಲ. ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ಕೆಂಪು ಬಣ್ಣದ ವಧುವಿನ ಲೆಹೆಂಗಾ ಧರಿಸಿ ಹಿಮದಲ್ಲಿ ಐಸ್ ಸ್ಕೇಟಿಂಗ್ ಮಾಡುತ್ತಿರುವುದನ್ನು ನೀವು ನೋಡಬಹುದು. ಐಸ್ ಸ್ಕೇಟಿಂಗ್ ಮಾಡುತ್ತಲೇ ಫೋಟೋಗೆ ಫೋಸ್ ನೀಡಿರುವುದನ್ನು ಕಾಣಬಹುದು.
ಸ್ಕೇಟಿಂಗ್ ಡ್ರೆಸ್ಕೋಡ್ ಧರಿಸಿದ್ದರೂ ಐಸ್ ಮೇಲೆ ಸ್ಕೇಟಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಎಕ್ಸ್ಪರ್ಟ್ಗಳಾಗಿದ್ದರು ಹಲವು ಬಾರಿ ಜಾರಿ ಬೀಳುತ್ತಾರೆ. ಆದರೆ ಮಹಿಳೆಯೊಬ್ಬರು ದಪ್ಪ ಕೆಂಪು ಲೆಹೆಂಗಾ ಧರಿಸಿದ್ದರೂ ಐಸ್ ಸ್ಕೇಟಿಂಗ್ ಮಾಡುತ್ತಾ ಫೋಟೋಗೆ ಫೋಸ್ ನೀಡುತ್ತಿರುವುದು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.
ಈ ವೈರಲ್ ವಿಡಿಯೋವನ್ನು ಇದುವರೆಗೂ 24 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಪೋಸ್ಟ್ ಅನ್ನು ನೆಟ್ಟಿಗರು, ದಿಯಾ ಮಿರ್ಜಾ ಸೇರಿದಂತೆ ಇತರ ಅನೇಕ ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ.(ಏಜೆನ್ಸೀಸ್)