

ಅನೇಕ ಜನರು ನದಿಗಳು ಮತ್ತು ಸರೋವರಗಳಲ್ಲಿ ಈಜಲು ಇಷ್ಟಪಡುತ್ತಾರೆ. ಆದರೆ ನೀರಿನ ಅಡಿಯಲ್ಲಿ ಅಡಗಿರುವ ಅಪಾಯಗಳ ಬಗ್ಗೆ ಬಹಳ ಕಡಿಮೆ ಜನರಿಗೆ ಮಾತ್ರ ತಿಳಿದಿರುತ್ತದೆ. ಸದ್ಯ ಅಂತಹದ್ದೆ ವಿಡಿಯೋವೊಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಆಘಾತಕಾರಿ ವಿಡಿಯೋದಲ್ಲಿ ವ್ಯಕ್ತಿ ನೀರಿಗಿಳಿರುವುದನ್ನು ನೋಡಬಹುದು. ಆತ ಮೋಜು ಮಾಡುವುದುನ್ನು ಅವನ ಗೆಳೆಯ ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತಿದ್ದಾನೆ. ಇದ್ದಕ್ಕಿದ್ದಂತೆ ಅವನಿರುವ ಸ್ಥಳದಲ್ಲಿ ನೀರಿನೊಳಗೆ ಏನೋ ಅನಿಸುತ್ತದೆ. ಅವನು ತನ್ನ ಕೈಗಳನ್ನು ನೀರಿನೊಳಗೆ ಬಿಟ್ಟು ಎತ್ತಿದ ತಕ್ಷಣ ಮೊಸಳೆಯೊಂದು ಬರುತ್ತದೆ. ಅವನ್ನು ಅದನ್ನು ಬೀಸಾಡಿ ಓಡಿಹೋಗಿ ದೋಣಿಗೆ ಏರುತ್ತಾನೆ. ಅಲ್ಲಿಗೆ ವಿಡಿಯೋ ಮುಗಿಯುತ್ತದೆ. ಸದ್ಯ ಅದು ಮರಿ ಮೊಸಳೆ ಆದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಾಗ, ಭಯಾನಕ ಮುಖಾಮುಖಿ! ಮೀಡಿಯಾ ಲೂನಾ ಕಡಲತೀರದಲ್ಲಿ ಈಜುತ್ತಿದ್ದ ವ್ಯಕ್ತಿಯೊಬ್ಬರು ಮೊಸಳೆಯನ್ನು ಎದುರಿಸಿದರು. ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಿದ್ದ ವ್ಯಕ್ತಿಗೆ ಈ ಅನುಭವವು ಕೆಲವೇ ಕ್ಷಣಗಳಲ್ಲಿ ಭೀಕರ ಅಪಘಾತವಾಗಿ ಮಾರ್ಪಟ್ಟಿತು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಈ ವಿಡಿಯೋವನ್ನು ಇದುವರೆಗೂ 22.7 ಮಿಲಿಯನ್ ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ದೇವರಿಗೆ ಧನ್ಯವಾದಗಳು ಅದು ಮರಿ ಮೊಸಳೆ ಇಲ್ಲದಿದ್ದರೆ ಕಥೆ ವಿಭಿನ್ನವಾಗಿರುತ್ತಿತ್ತು, ಅಭಿನಂದನೆಗಳು! ನಿಮಗೆ ಜೀವನವನ್ನು ನಡೆಸಲು ಇನ್ನೊಂದು ಅವಕಾಶ ಸಿಕ್ಕಿದೆ, ನೀರಿನಲ್ಲಿ ಅಡಗಿರುವ ಅಪಾಯಗಳ ಕಡೆಗೆ ಬೆರಳು ತೋರಿಸುತ್ತದೆ, ಎಚ್ಚರದಿಂದಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.