ಡ್ಯಾನ್ಸ್ ಮಾಡಲು ಹೋಗಿ ಬಿದ್ದ ಮಹಿಳೆ; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..

Untitled design - 2025-01-06T201433.796
Published on

ಇತ್ತೀಚೆಗೆ ರೀಲ್ಸ್​ ಮಾಡಲು ಜನರು ಏನೆಲ್ಲಾ ಹುಚ್ಚಾಟ ಮಾಡುತ್ತಾರೆ ಎಂಬುದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅಪಾಯ ಎಂದು ತಿಳಿದರೂ ರೀಲ್ಸ್​ಗಾಗಿ ಹರಸಾಹಸ ಪಟ್ಟು ತಮ್ಮ ಇಷ್ಟವನ್ನು ಪೂರೈಸಿಕೊಳ್ಳುತ್ತಾರೆ. ಅಪಾಯದ ಅಂಚಿಗ ಹೋಗಿ ಅದೃಷ್ಟವಶಾತ್​​ ಪಾರಾಗಿರುವವರನ್ನು ನೋಡಿರುತ್ತೇವೆ. ಸದ್ಯ ಇಂತಹದ್ದೇ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್​(Viral Video) ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ಮಹಿಳೆಯೊಬ್ಬರು ಕೊಳದ ದಂಡೆಯಲ್ಲಿ ಸ್ವಲ್ಪ ಎತ್ತರದಲ್ಲಿ ನಿಂತು ಡ್ಯಾನ್ಸ್​ ಮಾಡುವುದನ್ನು ನೋಡಬಹುದು. ಪಂಚಾಯತ್-3 ರ ಪ್ರಸಿದ್ಧ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಅವರು ನಿಂತಿರುವ ಜಾಗದಲ್ಲಿ ಭೂಮಿಯು ಕುಸಿಯುತ್ತದೆ. ನೆಲ ಜಾರುತ್ತಿದ್ದಂತೆ ಮಹಿಳೆ ಕೆಳಗೆ ಬೀಳುತ್ತಾರೆ. ಆದರೆ ಬಿದ್ದ ನಂತರವೂ ಮಹಿಳೆಯ ಉತ್ಸಾಹವು ಹೆಚ್ಚಾಗಿ ಡ್ಯಾನ್ಸ್​ ಮಾಡಲು ಪ್ರಯತ್ನಿಸುವುದನ್ನು ಕಾಣಬಹುದು. ಕೆಳಗೆ ಬಿದ್ದರು ಅವರ ಅದೃಷ್ಟ ಯಾವುದೇ ಅಪಾಯವಾಗಿಲ್ಲ.

13 ಸೆಕೆಂಡುಗಳ ಈ ವಿಡಿಯೋವನ್ನುಇದುವರೆಗೂ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಕೆಲವರು ಪ್ರತಿಕ್ರಿಯಿಸಿದ್ದಾರೆ. ವಾಹ್ ದೀದಿ ವಾವ್!, ಇದರಿಂದ ಅಪಾರ ನಷ್ಟ ಉಂಟಾಗಿದೆ, ರೀಲ್ಸ್​ಗಾಗಿ ಜನರು ಏನು ಬೇಕಾದರೂ ಮಾಡುತ್ತಾರೆ, ಆಂಟಿ ಈ ರೀತಿ ಮಾಡಬಾರದಿತ್ತು ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net