

ಐಐಟಿ ಅಂದರೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪ್ರತಿದಿನ ಐಐಟಿಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ. ಆದರೆ ಸದ್ಯ ಐಐಟಿಯ ವಿಡಿಯೋವೊಂದು ವೈರಲ್(VIral Video) ಆಗಿದ್ದು ನೋಡುಗರನ್ನು ಬೆಚ್ಚಿ ಬೀಳಿಸುವಂತಿದೆ.
ವೈರಲ್ ವಿಡಿಯೋದಲ್ಲಿ 'ಸ್ತ್ರೀ 2' ಸಿನಿಮಾದ 'ಆಜ್ ಕಿ ರಾತ್' ಹಾಡಿಗೆ ವಿದ್ಯಾರ್ಥಿನಿಯೊಬ್ಬರು ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಬಹುದು. ನೃತ್ಯ ಮಾಡುವಾಗ ಹುಡುಗಿ ತೊಟ್ಟಿರುವ ಕಪ್ಪು ಬಣ್ಣದ ಉಡುಪು ಸಿನಿಮಾದಲ್ಲಿ ನಟಿ ತಮನ್ನಾ ಭಾಟಿಯಾ ಬಳಸಿರುವ ಉಡುಪಿನಂತೆಯೇ ಕಾಣುತ್ತದೆ. ಹುಡುಗಿಯ ಈ ನೃತ್ಯ ನೋಡಿದ ಪ್ರೇಕ್ಷಕರು ಶಿಳ್ಳೆ ಮತ್ತು ಚಪ್ಪಾಳೆ ತಟ್ಟುವುದನ್ನು ಕೇಳಬಹುದು.
ಕಾಲೇಜುಗಳಲ್ಲಿ ಇಂತಹ ಬೋಲ್ಡ್ ಪ್ರದರ್ಶನಗಳನ್ನು ಹೆಚ್ಚಾಗಿ ಮಾಡಲಾಗುವುದಿಲ್ಲ. ಆದರಿಂದಾಗಿ ನೆಟ್ಟಿಗರಿಗೆ ಈ ವಿಡಿಯೋ ಸಾಕಷ್ಟು ಆಘಾತಕಾರಿಯಾಗಿದೆ. ಇದು ಐಐಟಿ ರೂರ್ಕಿಯೇ ಅಥವಾ ಅಶ್ಲೀಲತೆಯ ಗುಹೆಯೇ? ಭಾರತೀಯ ವಿಶ್ವವಿದ್ಯಾಲಯಗಳು ನಿರಾಕರಿಸಿವೆ ಎಂಬ ಶೀರ್ಷಿಕೆಯನ್ನು ನೀಡಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇದುವರೆಗೂ ಈ ವಿಡಿಯೋವನ್ನು 1 ಲಕ್ಷ 37 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ, ಹಲವರು ಪ್ರತಿಕ್ರಿಯಿಸಿದ್ದಾರೆ. ಅವಳು ನನಗೆ ವಿದ್ಯಾರ್ಥಿಯಂತೆ ಕಾಣುತ್ತಿಲ್ಲ ವೃತ್ತಿಪರ ನೃತ್ಯಗಾರ್ತಿಯಂತೆ ಕಾಣುತ್ತಾಳೆ, ಇಂತಹ ಪ್ರದರ್ಶನ ನೀಡಲು ಅನುಮತಿ ನೀಡುವವರನ್ನು ಅಮಾನತುಗೊಳಿಸಬೇಕು, ಐಐಟಿ ರೂರ್ಕಿ ಎಂದು ಎಲ್ಲೂ ವಿಡಿಯೋದಲ್ಲಿ ಗೋಚರಿಸಿಲ್ಲ, ಇದು ಸ್ಟೇಜ್ ಶೋನಂತೆ ಕಾಣುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.