ಗರ್ಭದಲ್ಲಿರುವ ಮಗು ಹನುಮಾನ್ ಚಾಲೀಸಾ ಕೇಳ್ತಿದ್ದಂತೆ ಹೇಗೆ ಪ್ರತಿಕ್ರಿಯಿಸಿತು ನೋಡಿ... ವಿಡಿಯೋ ವೈರಲ್​! Hanuman Chalisa

Hanuman Chalisa
Published on

Hanuman Chalisa : ಮಹಿಳೆಯರು ಗರ್ಭ ಧರಿಸಿದಾಗ ಒಳ್ಳೆಯ ಸಾಹಿತ್ಯ ಓದಬೇಕು, ಒಳ್ಳೆಯ ಹಾಡುಗಳನ್ನು ಕೇಳಬೇಕು ಮತ್ತು ಆಧ್ಯಾತ್ಮಿಕತೆಯತ್ತ ಗಮನಹರಿಸಬೇಕು ಎಂದು ಹಿರಿಯರು ಹೇಳುವುದನ್ನು ನೀವು ಹೆಚ್ಚಾಗಿ ಕೇಳುತ್ತೀರಿ. ಏಕೆಂದರೆ ಗರ್ಭದಲ್ಲಿರುವ ಶಿಶುಗಳು ಇದನ್ನೆಲ್ಲ ಕೇಳಿ ಅರ್ಥಮಾಡಿಕೊಳ್ಳುತ್ತವೆ ಎಂದು ನಂಬಲಾಗಿದೆ.

ಶಿಶುಗಳು ಸಂಗೀತಕ್ಕೆ ಪ್ರತಿಕ್ರಿಯಿಸುತ್ತವೆ ಎಂದು ಸ್ವತಃ ವೈದ್ಯರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಜನರು ಭಜನೆ, ಭಕ್ತಿಗೀತೆಗಳು ಇತ್ಯಾದಿಗಳನ್ನು ಕೇಳಲು ಸಲಹೆ ನೀಡುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ನೋಡಿದರೆ ಈ ಮಾತುಗಳು ಸತ್ಯ ಎಂಬುದನ್ನು ಸಾಕ್ಷಿಕರಿಸಿದೆ.

ಗರ್ಭಿಣಿಯೊಬ್ಬರು ತನ್ನ ಗರ್ಭದಲ್ಲಿರುವ ಮಗುವಿಗೆ ಮೊಬೈಲ್​ನಲ್ಲಿ ಹನುಮಾನ್ ಚಾಲೀಸಾ ಕೇಳಿಸಿದಾಗ ಮಗು ಪ್ರತಿಕ್ರಿಯಿಸುತ್ತದೆ. ಗರ್ಭಿಣಿಯು ಮೊದಲು ಮೊಬೈಲ್​ನಲ್ಲಿ ಸಿನಿಮಾ ಹಾಡನ್ನು ಪ್ಲೇ ಮಾಡಿ ಹೊಟ್ಟೆಯ ಮುಂದೆ ಹಿಡಿಯುತ್ತಾರೆ. ಈ ವೇಳೆ ಮಗು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬಳಿಕ ಹನುಮನ್​ ಚಾಲೀಸಾವನ್ನು ಪ್ಲೇ ಮಾಡಿ ಹೊಟ್ಟೆಯ ಮುಂದೆ ಹಿಡಿದಾಗ ಮಗು ಒಳಗೆ ಚಲಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಅಂದಹಾಗೆ ಈ ವಿಡಿಯೋವನ್ನು @SunRaah ಎಂಬ ಇನ್​ಸ್ಟಾಗ್ರಾಂ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ ವಿಡಿಯೋ ವೈರಲ್ ಆಗಿದೆ. ಈಗಾಗಲೇ ಒಂದು ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಮಗು ಒಳಗೆ ಎಲ್ಲವನ್ನೂ ಕೇಳುತ್ತಿದೆ, ಹನುಮಂತನ ಆಶೀರ್ವಾದ ಯಾವಾಗಲೂ ನಿಮ್ಮೊಂದಿಗೆ ಇರಲಿ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಅನೇಕ ಜನರು ಜೈ ಶ್ರೀ ರಾಮ್ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net