Zodiac Signs : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳು ಹಾಗೂ ಗ್ರಹಗಳ ಸಂಚಾರವೂ ವ್ಯಕ್ತಿಯು ಜನಿಸಿದ ರಾಶಿಚಕ್ರದ ಚಿಹ್ನೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ.
ಮಂಗಳ ಗ್ರಹವನ್ನು ವೈದಿಕ ಜ್ಯೋತಿಷ್ಯದಲ್ಲಿ ಪ್ರಮುಖ ಗ್ರಹ ಎಂದು ಪರಿಗಣಿಸಲಾಗಿದೆ. ಗ್ರಹಗಳ ಅಧಿಪತಿ ಎಂದು ಪರಿಗಣಿಸಲ್ಪಟ್ಟ ಮಂಗಳವು ಹೆಚ್ಚಾಗಿ ಧೈರ್ಯ, ಶಕ್ತಿ, ಶೌರ್ಯ ಮತ್ತು ಬಲದೊಂದಿಗೆ ಸಂಬಂಧ ಹೊಂದಿದೆ. ಮಂಗಳವನ್ನು ಗ್ರಹಗಳ ಕಮಾಂಡರ್ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಇದು ಜೀವನದ ಅನೇಕ ಅಂಶಗಳ ಮೇಲೆ ಅಗಾಧ ಪ್ರಭಾವವನ್ನು ಬೀರುತ್ತದೆ.
ರಾಶಿಚಕ್ರ ಚಿಹ್ನೆಗಳು ಮತ್ತು ನಕ್ಷತ್ರಪುಂಜಗಳ ನಡುವೆ ಮಂಗಳ ಗ್ರಹದ ಸಂಚಾರವೂ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಅಂದಹಾಗೆ ಮಂಗಳ ಗ್ರಹವು ಪ್ರಸ್ತುತ ಪುನರ್ವಸು ನಕ್ಷತ್ರದಲ್ಲಿದೆ. ಆದರೆ, 2025ರ ಏಪ್ರಿಲ್ 12 ರಂದು ಬೆಳಗ್ಗೆ 6.32ಕ್ಕೆ ಅನುಕೂಲಕರ ಪುಷ್ಯ ನಕ್ಷತ್ರಕ್ಕೆ ಚಲಿಸುತ್ತದೆ. ಇದರಿಂದ ಅಪರೂಪದ ಮತ್ತು ಶಕ್ತಿಯುತವಾದ ಮಂಗಳ-ಪುಷ್ಯ ಯೋಗ ರೂಪುಗೊಳ್ಳಲಿದೆ.
ಮಂಗಳ-ಪುಷ್ಯ ಯೋಗದ ವಿಶೇಷ ಜೋಡಣೆಯು ಅಗಾಧ ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ. ನಿರ್ದಿಷ್ಟ ರಾಶಿಚಕ್ರ ಚಿಹ್ನೆಗಳಿಗೆ ಸಮೃದ್ಧಿ ಮತ್ತು ಆರ್ಥಿಕ ಅನುಕೂಲಗಳಾಗಲಿವೆ. ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ವೃಷಭ ರಾಶಿ
ಮಂಗಳ ಗ್ರಹವು ಪುಷ್ಯ ನಕ್ಷತ್ರದಲ್ಲಿ ಸಂಚರಿಸುವುದರಿಂದ ಈ ರಾಶಿಯವರು ಜೀವನದ ಪ್ರಮುಖ ಅಂಶಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಬಹುದು. ವ್ಯವಹಾರದಲ್ಲಿ ನಿರೀಕ್ಷಿತ ಲಾಭಗಳು ಹೆಚ್ಚಾಗುತ್ತವೆ. ಹೊಸ ಉದ್ಯೋಗದಲ್ಲಿರುವವರಿಗೆ ಸಂಬಳ ಹೆಚ್ಚಳವಾಗುತ್ತದೆ ಮತ್ತು ಈ ರಾಶಿಯವರು ಹೆಚ್ಚಿನ ಹಣವನ್ನು ಉಳಿಸುವಿರಿ. ಈ ಸಮಯವು ಉತ್ತಮ ಹೂಡಿಕೆಗಳಿಗೆ ಅವಕಾಶಗಳನ್ನು ನೀಡಬಹುದು. ಇದರಿಂದ ದೀರ್ಘಾವಧಿಯ ಆರ್ಥಿಕ ಭದ್ರತೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕಾಡಿನೊಳಗೆ ಪತ್ತೆಯಾದ ಸುರಂಗ: ಒಳಗೆ ಏನಿದೆ ಎಂದು ನೋಡಿದ ಯೋಧರಿಗೆ ಕಾದಿತ್ತು ಅಚ್ಚರಿ! Tunnel
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಮಂಗಳನ ಸಂಚಾರವು ಹೆಚ್ಚಿನ ಲಾಭವನ್ನು ತರುತ್ತದೆ. ಮಂಗಳ ಲಗ್ನದಲ್ಲಿರುವುದರಿಂದ, ಅವರಿಗೆ ಹೊಸ ಅವಕಾಶಗಳು ಹರಿದು ಬರುತ್ತವೆ. ನೀವು ಯಾವುದೇ ಪ್ರಯತ್ನವನ್ನು ಮಾಡಿದರೆ, ನೀವು ಗಣನೀಯ ಯಶಸ್ಸನ್ನು ಸಾಧಿಸುವಿರಿ. ಹೂಡಿಕೆ ಮಾಡುವ ಹಣದಿಂದ ಸಾಕಷ್ಟು ಲಾಭವನ್ನು ಪಡೆಯಬಹುದು ಮತ್ತು ನಿಮ್ಮ ದೈಹಿಕ ಆರೋಗ್ಯವು ಸಹ ಉತ್ತಮವಾಗಿರುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಮಂಗಳ ಪುಷ್ಯ ಯೋಗವು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಈ ಅವಧಿಯಲ್ಲಿ ನಿಮಗೆ ಅನಿರೀಕ್ಷಿತ ಹೊಸ ಅವಕಾಶಗಳು ಸಿಗುತ್ತವೆ. ನೀವು ಮಾಡುವ ಯಾವುದೇ ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆಯುವ ಸಾಧ್ಯತೆಯಿದೆ. ನಿಮ್ಮ ಎಲ್ಲ ಪ್ರಯತ್ನಗಳ ಲಾಭವನ್ನು ನೀವು ಹಲವು ವಿಧಗಳಲ್ಲಿ ಪಡೆಯುತ್ತೀರಿ. ಅಲ್ಲದೆ, ಉತ್ತಮ ಆರೋಗ್ಯವನ್ನು ಪಡೆಯಲಿದ್ದೀರಿ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್ ನೆಟ್ ಸೈಟ್ ಜವಾಬ್ದಾರರಾಗಿರುವುದಿಲ್ಲ.
ತಾಮ್ರದ ಉಂಗುರ ಧರಿಸುವುದು ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Copper Ring
145 ಕೆಜಿ ತೂಕ, ಶೇ. 55ರಷ್ಟು ಕೊಬ್ಬು… ಈತನ ತೂಕ ಇಳಿಕೆಯ ಪ್ರಯಾಣವೇ ಎಲ್ಲರಿಗೂ ಸ್ಫೂರ್ತಿ! Weight loss